ಕನ್ಯಪ್ಪಾಡಿಯಲ್ಲಿ ರಸ್ತೆ ಮಧ್ಯೆ ಕಾಡುಕೋಣ ಪ್ರತ್ಯಕ್ಷ

ಬದಿಯಡ್ಕ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ    ಭಾರೀ ಗಾತ್ರದ ಕಾಡುಕೋಣ ಪತ್ತೆಯಾಗಿದೆ.  ನೀರ್ಚಾಲು ಬಳಿಯ ಕನ್ಯಪ್ಪಾಡಿಯಲ್ಲಿ ನಿನ್ನೆ ರಾತ್ರಿ 12 ಗಂಟೆ ವೇಳೆ  ಕಾಡುಕೋಣ ಕಂಡುಬಂದಿದೆ. ಇಲ್ಲಿನ ಬಸ್ ಪ್ರಯಾಣಿಕರ ತಂಗುದಾಣದ ಮುಂದೆ ದೀರ್ಘ ಹೊತ್ತು ನಿಂತಿದ್ದ ಕಾಡು ಕೋಣದ ಚಿತ್ರವನ್ನು ಈ ರಸ್ತೆಯಲ್ಲಿ ಸಂಚರಿಸಿದವರು ತೆಗೆದಿದ್ದರು.  ಈ ಪ್ರದೇಶದಲ್ಲಿದ್ದ ಬೀದಿ ನಾಯಿಗಳು ಕಾಡುಕೋಣವನ್ನು ಸುತ್ತುವರಿದು ದಾಳಿಗೆ ಮುಂದಾಗಿ ದ್ದವು. ಇದರಿಂದ ಕಾಡುಕೋಣ ಅಲ್ಲಿಂದ ಪರಾರಿಯಾಗಿದೆ. ಕೆಲವು ದಿನಗಳ ಹಿಂದೆಯೂ ಕನ್ಯಪ್ಪಾಡಿಯಲ್ಲಿ ಕಾಡುಕೋಣವನ್ನು ಕಂಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಅಂದು ಅದರ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಕಾಡು ಕೋಣ ಕಂಡುಬಂದ ಬಗ್ಗೆ ಸುದ್ದಿಯಾದರೂ ಅದನ್ನು ಹೆಚ್ಚಿನವರು ನಂಬಿರಲಿಲ್ಲ. ಆದರೆ  ನಿನ್ನೆ ರಾತ್ರಿ ರಸ್ತೆ ಮಧ್ಯೆ ಕಂಡುಬಂದ ಕಾಡುಕೋಣದ  ದೃಶ ಬಹಿರಂಗವಾಗುವುದರೊಂದಿಗೆ ನಾಗರಿಕರು ಭೀತಿಯಲ್ಲಿದ್ದಾರೆ. ತೀವ್ರಗೊಂಡ ಉಷ್ಣತೆ ಹಾಗೂ ಕುಡಿಯುವ ನೀರು ಕ್ಷಾಮ ಉಂಟಾಗಿ ರುವುದರಿಂದ ಕಾಡುಕೋಣಗಳು ನಾಡಿಗಿಳಿ ದಿರುವುದಾಗಿ ಹೇಳಲಾಗು ತ್ತಿದೆ. ಉಷ್ಣತೆ ಹೆಚ್ಚಿದಂತೆ ಇನ್ನಷ್ಟು ವನ್ಯಮೃಗಗಳು ನಾಡಿಗಿಳಿಯಲಿ ದೆಯೆಂಬ ಭೀತಿ  ಉಂಟಾಗಿದೆ. ಇತ್ತೀಚೆಗೆ ಉದುಮ ಪಂಚಾಯತ್‌ನ ಬಾರಾ ಅರಮಂಗಾನ ಶಾಲೆ ಸಮೀಪವೂ ಕಾಡುಕೋಣ ಕಂಡುಬಂದಿರುವುದಾಗಿ ಸುದ್ದಿಯಾಗಿದೆ.

You cannot copy contents of this page