ಅಧ್ಯಾಪಿಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಪಯ್ಯನ್ನೂರು ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ಅಧ್ಯಾಪಿಕೆ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಮುಸಾಫರ್ ನಗರ್ ಮೆಹ್ಲಾಕಿಯ ಲೋಕೇಶ್ ಕುಮಾರ್ ಎಂಬವರ ಪುತ್ರಿ ಸುರಭಿಪಾಲ್ (29) ಮೃತ ಅಧ್ಯಾಪಿಕೆ. ನಿನ್ನೆ ರಾತ್ರಿ 9 ಗಂಟೆಗೆ ಕುಂಞಿಮಂಗಲಂ ಎಡಾಟ್‌ನ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. 2023 ಡಿ. 13ರಂದು ಸುರಭಿಪಾಲ್ ಪಯ್ಯನ್ನೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಾಪಿಕೆಯಾಗಿ ನೇಮಕಗೊಂಡಿದ್ದರು. ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಪಾಲಕ್ಕಾಡ್ ಕಡಂಬೂರಿನ ವೆಮ್ಮರತ್ತಿಲ್ ವೀಟಿಲ್ ಕೆ. ರಾಜೇಂದ್ರನ್‌ರ ದೂರಿನಂತೆ ಪಯ್ಯನ್ನೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page