ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕೋಡಿಬೈಲುನಲ್ಲಿ ಎರಡು ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಣ್ಣಂಗುಳಿಯಿಂದ ಕೋಡಿಬೈಲು ಹಾಗೂ ಉಪ್ಪಳ ಪತ್ವಾಡಿ ರಸ್ತೆಯಿಂದ ಕೋಡಿಬೈಲು ಪ್ರದೇಶಕ್ಕೆ ಸೇರುವ ರಸ್ತೆಗಳು ಶೋಚನೀಯಗೊಂಡಿದೆ. ಈ ಪ್ರದೇಶದಲ್ಲಿ ಶಾಲೆ, ನೂರಾರು ಮನೆಗಳಿದ್ದು, ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತಿವೆ. ರಸ್ತೆಯ ಅಲ್ಲಲ್ಲಿ ಡಾಮಾರೀಕರಣ, ಕಾಂಕ್ರೀಟ್, ಇಂಟರ್‌ಲಾಕ್ ಇದ್ದು ಇವುಗಳೆಲ್ಲ ಹೊಂಡ ಗುಂಡಿಗಳಿAದ ಕೂಡಿ ಸಂಚಾರ ದುಸ್ತರವಾಗಿದೆ. ಸಂಬAಧ ಪಟ್ಟ ಅಧಿಕಾರಿಗಳು ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.






