ಕಾಸರಗೋಡು: ಮಾರುತಿ ಸ್ವಿಫ್ಟ್‌ಕಾರಿನಲ್ಲಿ ಸಾಗಿಸುತ್ತಿದ್ದ 103.68 ಲೀಟರ್ ಕರ್ನಾಟಕ, ಗೋವಾ ನಿರ್ಮಿತ ಮದ್ಯ ಸಹಿತ ಯುವಕ ಸೆರೆಯಾಗಿದ್ದಾನೆ. ಕುಂಜತ್ತೂರು ಅಣ್ಣಮಜಲ್ ನಿವಾಸಿ ಕೆ.ಎ. ರವಿಕಿರಣ್ (38ನನ್ನು ಕಾಸರಗೋಡು ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಟಿ.ಕೆ. ಅಶ್ವಿನ್ ಹಾಗೂ ತಂಡ ಬಂಧಿಸಿದೆ. ಮುಂಜಾನೆ ಬೇಳ ನೀರ್ಚಾಲ್‌ನಲ್ಲಿ ಮದ್ಯ ವಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಸೆರೆಗೀಡಾದ ರವಿಕಿರಣ್ ಖಾಯಂ ಆಗಿ ಮದ್ಯ ಸಾಗಿಸುವ ವ್ಯಕ್ತಿಯಾಗಿದ್ದಾನೆಂದು ಈತನನ್ನು ತಿಂಗಳುಗಳಿಂದ ನಿರೀಕ್ಷಿಸುತ್ತಿದ್ದುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.
ಗೋವಾ ನಿರ್ಮಿತವಾದ 180 ಮಿಲ್ಲಿಯ ಬಾಟ್ಲಿಗಳು, ಕರ್ನಾಟಕ ನಿರ್ಮಿತ ಪ್ಯಾಕೆಟ್ ಮದ್ಯವನ್ನು ದೊಡ್ಡ ಕಾರ್ಡ್‌ಬೋರ್ಟ್ ಪೆಟ್ಟಿಗೆಗಳಲ್ಲಿ ತುಂಬಿಸಿ ವಿವಿಧ ಸ್ಥಳಗಳಿಗೆ ತಲುಪಿಸಿ ಕೊಡುವುದು ಈತನ ರೀತಿಯಾಗಿದೆ ಎಂದು ಎಕ್ಸೈಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ಸ್‌ಪೆಕ್ಟರ್‌ಗಳಾದ ಕೆ.ವಿ. ವಿನೋದನ್, ಎನ್.ವಿ. ದಿವಾಕರನ್, ಇಂಟೆಲಿಜೆನ್ಸ್ ಬ್ಯೂರೋದ ಸಿ.ಒ. ಸಾಜನ್, ಎಂ. ಅನುರಾಗ್, ಎಂ. ಶ್ಯಾಮ್‌ಜಿತ್, ಮೈಕಲ್ ಜೋಸೆಫ್ ಮೊದಲಾದವರು ಕಾರ್ಯಾಚರಣೆ ತಂಡದಲ್ಲಿದ್ದರು.






