ದೇವಸ್ಥಾನಗಳಲ್ಲಿ ಕಳವು ನಡೆಸಿದ ತಂಡದ ಇಬ್ಬರ ಸೆರೆ

ಕಾಸರಗೋಡು:  ದೇವಸ್ಥಾನಗ ಳಲ್ಲಿ ಕಳವುಗೈದ ಪ್ರಕರಣದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ತೃಶೂರು ಆಂಬಲ್ಲೂರು ಕಳಲಿ ಹೌಸ್‌ನ ಶಿಬು ರಾಫೆಲ್ (54) ಮತ್ತು ಕಣ್ಣೂರು ಮಟ್ಟನ್ನೂರು ಕೋಳಾರಿ ಪಾಲೋಟ್‌ಪಳ್ಳಿ ಬದರ್ ಮಂಜಿಲ್‌ನ ಅಬ್ದುಲ್ ಜಲೀಲ್ (50) ಎಂಬಿವರು ಬಂಧಿತ ಆರೋಪಿಗಳು.

ನೀಲೇಶ್ವರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಎ.ವಿ. ಶ್ರೀಕುಮಾರ್‌ರ  ನೇತೃತ್ವದ ಪೊಲೀಸರ ತಂಡ ಈ ಇಬ್ಬರು ಆರೋಪಿಗಳನ್ನು ತಮಿಳುನಾಡಿನ ಎರ್ವಾಡಿನಿಂದ ಸೆರೆಹಿಡಿದಿದೆ.  ಕಳೆದ ಫೆಬ್ರವರಿ 21ರಂದು ರಾತ್ರಿ ನೀಲೇಶ್ವರಕ್ಕೆ ಸಮೀಪದ ಪೇರೋಲ್ ಕೊಳುಂತಿಲ್ ನಾರಾಂಕುಳಂಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬೀಗ ಒಡೆದು ಒಳನುಗ್ಗಿ ಅಲ್ಲಿಂದ ನಾಲ್ಕು ತಾಮ್ರದ ಕಾಣಿಕೆಹುಂಡಿಗಳು, ಒಂದು ಸ್ಟೀಲ್ ಹುಂಡಿ ಹಾಗೂ ಪ್ರಸ್ತುತ ದೇವಸ್ಥಾನದ ಗರ್ಭಗುಡಿ ಬಾಗಿಲಲ್ಲಿದ್ದ ಇನ್ನೊಂದು ಸ್ಟೀಲ್ ಹುಂಡಿಯನ್ನು ಒಡೆದು ಅದರೊಳಗಿದ್ದ 25,500 ರೂ. ನಷ್ಟು ಹಣ ಕಳವು ಪ್ರಕರಣಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಪಾಲಕ್ಕಾಡ್ ಚುಳಲಿ ಭಗವತಿ ಕ್ಷೇತ್ರದಲ್ಲಿ ನಡೆದ ಕಳವು ಪ್ರಕರಣ ದಲ್ಲೂ ಈ ಇಬ್ಬರು ಆರೋಪಿಗಳಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಸೆರೆಹಿಡಿದ ಪೊಲೀಸರ ತಂಡದಲ್ಲಿ ಎಸ್‌ಐ ಕೆ.ವಿ. ರತೀಶನ್, ಇತರ ಪೊಲೀಸ್ ಸಿಬ್ಬಂದಿಗಳಾದ ದಿಲೀಶ್ ಕುಮಾರ್  ಪಳ್ಳಿಕೈ, ಮಹೇಶ್ ಕಾವುಂಗಾಲ್, ಧನೇಶ್ ಪಿಲಿಕ್ಕೋಡು, ಅಜಿತ್ ಪಳ್ಳಿಕ್ಕೆರೆ, ಬಿಜೊ, ಡಿವೈಎಸ್ಪಿ ಸ್ಕ್ವಾಡ್‌ನ  ಎಸ್‌ಐ ಅಬೂಬಕರ್ ಕಲ್ಲಾಯಿ, ಸಾಜು ಥೋಮಸ್, ನಿಖೇಶ್ ಮತ್ತು ಜಿನೇಶ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page