ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ರಿಸ್ಕ್ ಫಂಡ್, ಸದಸ್ಯರ ಕ್ಷೇಮ ನಿಧಿ ಯೋಜನೆ ಫಲಾ ನುಭವಿಗಳಿಗೆ ಬ್ಯಾಂಕ್ ವತಿಯಿಂದ ಕೇರಳ ಸರಕಾರದಿಂದ ಕೊಡಲ್ಪಡುವ ರಿಸ್ಕ್ ಫಂಡ್, ಕ್ಷೇಮ ನಿಧಿಯನ್ನು ಸಹಕಾರಿ ಇಲಾಖೆಯ ನೂತನ ಪರಿ ಶೋಧಕ ಜಯರಾಮ್ ಮತ್ತು ಬ್ಯಾಂಕಿನ ಅಧ್ಯಕ್ಷ ಮೊಹಮ್ಮದ್ ಹನೀಫ್ ವಿತರಿಸಿದರು. ಉಪಾಧ್ಯಕ್ಷ ಸತ್ಯನಾರಾ ಯಣ ಭಟ್, ನಿರ್ದೇಶಕರಾದ ರಾಬಿಯಾ, ನಿಕೋಲಸ್ ಮೊಂತೇರೊ, ವಿನೋದ್ ಕುಮಾರ್, ಸುನಿತಾ ಡಿ ಸೋಜಾ, ಪ್ರವೀಣ ಕೆ, ಜಗದೀಶ್ ಚೆಂಡ್ಲ, ತುಳಸಿ ಕುಮಾರಿ, ಉಪಸ್ಥಿತರಿದ್ಧರು. ಕಾರ್ಯದರ್ಶಿ ಶ್ರೀವತ್ಸ ಭಟ್ ನಿರೂಪಿಸಿದರು. ಫಲಾನುಭವಿಗಳಾದ ಕಿರಣ್ ಕುಮಾರ್ ಉಜಾರು, ಚಂದ್ರಹಾಸ ಪೂಜಾರಿ ಮುಡಿಮಾರು, ಕೃಷ್ಣಪ್ಪ ಮಡಿಕ, ಅಬ್ಧುಲ್ಲ ಪರನೀರು ಹಾಗೂ ಅಬ್ಧುಲ್ಲ ಸಲಾಂ ಕೆದುಂಬಾಡಿ ಇವರಿಗೆ ಪರಿಹಾರ ನಿಧಿಯನ್ನು ನೀಡಲಾಯಿತು.







