ಕುಂಟಾರಿನಲ್ಲಿ ಯಶಸ್ವಿಗೊಂಡ ಸಾಹಿತ್ಯೋತ್ಸವ

ಮುಳ್ಳೇರಿಯ: ಕುಂಟಾರು ಎ.ಯು.ಪಿ ಶಾಲೆ ಮತ್ತು ಕನ್ನಡ ಸಂಶೋಧನಾ ಕೇಂದ್ರ ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕ, ಹಳೆವಿದ್ಯಾರ್ಥಿಗಳ ಸಂಘ ಎ.ಯು.ಪಿ.ಶಾಲೆ ಕುಂಟಾರು ಇವರ ಸಹಕಾರದೊಂದಿಗೆ ಕುಂಟಾರು ಸಾಹಿತ್ಯೋತ್ಸವ ಕುಂಟಾರು ಶಾಲೆಯಲ್ಲಿ ನಡೆಯಿತು.
ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ ಸಾಹಿತ್ಯೋತ್ಸವ ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಿ ದರು. ಸಾಹಿತ್ಯ ಗ್ರಾಮೀಣ ಪ್ರದೇಶದ ಜನರ ಹೃದಯ ಮುಟ್ಟುವಲ್ಲಿ ಕುಂಟಾರು ಸಾಹಿತ್ಯೋತ್ಸವದಂತಹ ಕಾರ್ಯಕ್ರಮ ದಿಂದ ಸಾಧ್ಯ ಎಂದು ಅವರು ಹೇಳಿದರು. ಕನ್ನಡದಲ್ಲಿ ಕೆಲವು ಪದಗಳೇ ಕಾಣೆಯಾಗುತ್ತಿದೆ ಮತ್ತು ಅದರ ವೇಗ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕೆಲವು ಪದಗಳ ಅಧ್ಯಯನ ನಡೆಯಬೇಕೆಂದರು. ಮಹೋತಾಭಾರ ಎಂಬ ಪದ ಅರೇ ಬಿಕ್‌ನ ಮಹತಬರ್ ಪದವಾಗಿದೆ, ಅದು ಸಂಸ್ಕೃತ ಪದವಲ್ಲ ಎಂದರು.
ವಿಶ್ರಾAತ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ ಕಾಸರಗೋಡು ಅಧ್ಯಕ್ಷತೆ ವಹಿಸಿ ಪುಸ್ತಕ ಪ್ರದರ್ಶನವನ್ನು ಉದ್ಘಾಟನೆಗೊಳಿಸಿದರು. ವಸ್ತು ಪ್ರದರ್ಶನವನ್ನು ಕಾರಡ್ಕ ಪಂ. ಅಧ್ಯಕ್ಷೆ ಜನನಿ. ಎಂ ಉದ್ಘಾಟಿಸಿದರು. ಚಿತ್ರ ಮತ್ತು ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಹಿರಿಯ ವ್ಯಂಗ್ಯಚಿತ್ರಗಾರ ಎಚ್.ಎಸ್.ವಿಶ್ವನಾಥ್ ಬೆಂಗಳೂರು ಉದ್ಘಾಟಿಸಿದರು. ಡಾ.ಮೋಹನ ಕುಂಟಾರ್ ಪ್ರಾಸ್ತಾವಿಕ ಭಾಷಣ ಮಾಡಿ ಕುಂಟಾರಿಗೆ ಸಾಂಸ್ಕೃತಿಕ ಹಿನ್ನೆಲೆ ಇದೆ. ಆದರೆ ಸಾಹಿತ್ಯಕ ಹಿನ್ನೆಲೆಯ ಕೊರತೆ ಇದೆ. ಅದು ನೀಗಬೇಕು. ಹೊಸ ಪೀಳಿಗೆ ಮೂಡಬೇಕೆಂಬ ಸಂಕಲ್ಪದಿAದಲೇ ಸಾಹಿತ್ಯೋತ್ಸವ ಆಯೋಜಿಸಲಾಗಿದೆ. ಇದು ಹೊಸ ತಲೆಮಾರನ್ನು ಹುಟ್ಟಿಸುವ ಮತ್ತು ಮುಟ್ಟುವ ಪ್ರಯತ್ನ ಎಂದರು. ಪಂ. ಸದಸ್ಯೆ ಬೇಬಿ ಕಟ್ಟತ್ತಬಯಲು, ಮುಖ್ಯ ಶಿಕ್ಷಕಿ ದಾಕ್ಷಾಯಣಿ ಉಪಸ್ಥಿತರಿದ್ದರು. ಪ್ರಕಾಶ್ ಮಾಸ್ಟರ್ ಸ್ವಾಗತಿಸಿ, ಕುಂಟಾರು ಸಾಹಿತ್ಯೋತ್ಸವ ಸಮಿತಿ ಉಪಾಧ್ಯಕ್ಷ ಜಗದೀಶ ಮಾಸ್ಟರ್ ವಂದಿಸಿದರು. ಯತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ದಿ.ಮಾಟೆಡ್ಕ ಪುರುಷೋತ್ತಮ ರಾವ್ ದ್ವಾರವನ್ನು ಎಂ.ನಾ. ಚಂಬಲ್ತಿಮಾರ್ ಉದ್ಘಾಟಿಸಿದರು. ಅನಂತರ ವಾದ್ಯಮೇಳದೊಂದಿಗೆ ಸಾಹಿತ್ಯೋತ್ಸವ ಮೆರವಣಿಗೆ ನಡೆಯಿತು.

RELATED NEWS

You cannot copy contents of this page