ಉಪ್ಪಳ: ಕೇರಳದಲ್ಲಿ ಈ ಬಾರಿ ಬಿಜೆಪಿ ನಿರ್ಣಾಯಕ ರಾಜ್ಯಕೀಯ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ಕೇಂದ್ರ ಸಚಿವೆ, ಕೇರಳ ವಿಧಾನಸಭಾ ಚುನಾವಣೆಯ ಸಹ ಪ್ರಭಾರಿ ಶೋಭಾ ಕರಂದ್ಲಾಜೆ ನುಡಿದರು. ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲ್‌ನಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಚುನಾವಣಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ ದರು. ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಮತದಾ ರರು ಸಿದ್ಧರಾಗಿದ್ದಾರೆ ಎಂದು ಸಚಿವೆ ನುಡಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಅಧ್ಯಕ್ಷತೆ ವಹಿಸಿದರು.
ಅಭ್ಯರ್ಥಿ ಕೆ. ಸುರೇಂದ್ರನ್, ದ.ಕ. ಜಿಲ್ಲೆಯ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಸುಫಲಚಂದ್ರ ನಾಯಕ್ ಮಂಗಲ್ಪಾಡಿ, ಕಲ್ಲಿಕೋಟೆ ಉತ್ತರ ವಲಯ ಸಮಿತಿ ಅಧ್ಯಕ್ಷ ಶ್ರೀಕಾಂತ್, ಮುಖಂಡರಾದ ಸುಧಾಮ ಗೋಸಾಡ, ಸುನಿಲ್ ಅನಂತಪುರ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಸುರೇಶ್ ಕುಮಾರ್ ಶೆಟ್ಟಿ, ಎ.ಕೆ. ಕಯ್ಯಾರ್, ಮಣಿಕಂಠ ರೈ, ಎನ್. ಮಧು, ಪಿ. ರಮೇಶ್, ಮುರಳೀಧರ ಯಾದವ್, ಲೋಕೇಶ್ ನೋಂಡ, ಕೆ.ಪಿ. ವಲ್ಸರಾಜ್, ನಾರಾಯಣ ನಾಯಕ್, ವಸಂತ ಕುಮಾರ್ ಮಯ್ಯ, ಯತಿರಾಜ್, ಕೆ.ವಿ. ಭಟ್, ಕೆ.ಪಿ. ಅನಿಲ್ ಕುಮಾರ್ ಉಪಸ್ಥಿತರಿದ್ದರು. ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿದರು. ವಿಜಯಕುಮಾರ್ ರೈ ಸ್ವಾಗತಿಸಿ, ಸುನಿಲ್ ಅನಂತಪುರ ವಂದಿಸಿದರು. ದಿವಾಕರ ಪ್ರತಾಪನಗರ ನಿರೂಪಿಸಿದರು.






