ಕಾಸರಗೋಡು ಮಂಡಲದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಸಮಸ್ಯೆ: ಜಿಲ್ಲಾ ಪದಾಧಿಕಾರಿಗಳು, ಎನ್.ಎ ನೆಲ್ಲಿಕುನ್ನು ಪಾಣಕ್ಕಾಡ್‌ಗೆ

ಕಾಸರಗೋಡು: ಕಾಸರಗೋಡು ಮಂಡಲದ ಮುಸ್ಲಿಂ ಲೀಗ್ ಅಭ್ಯರ್ಥಿ  ನಿರ್ಣಯ ಸಮಸ್ಯೆಯನ್ನು  ಪರಿಹರಿಸಲು  ಮುಸ್ಲಿಂ ಲೀಗ್ ಜಿಲ್ಲಾ ಪದಾಧಿಕಾರಿಗಳನ್ನು ಹಾಗೂ ಶಾಸಕ ಎನ್.ಎ. ನೆಲ್ಲಿಕುನ್ನು ಅವರನ್ನು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ  ಪಾಣಕ್ಕಾಡ್ ಸಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್‌ಗೆ ಕರೆಸಿದ್ದಾರೆ.  ಇದರಂತೆ ನೇತಾರರು ಶೀಘ್ರ ಪಾಣಕ್ಕಾಡ್‌ಗೆ ತೆರಳಲಿದ್ದಾರೆ.    ಮುಸ್ಲಿಂ ಲೀಗ್‌ನ ಪರಂಪರಾಗತ ಮಂಡಲವಾದ ಕಾಸರಗೋಡಿನಲ್ಲಿ  ಸ್ಪರ್ಧಿಸುವ ಬಗ್ಗೆ   ಮಂಡಲ ಹಾಗೂ ಜಿಲ್ಲೆಯ ಹೊರಗಿನವರಾದ  ಲೀಗ್ ನೇತಾರ  ಕೆ.ಎಂ. ಶಾಜಿ ಈ ಮೊದಲು ಆಸಕ್ತಿ ಹೊಂದಿದ್ದರು. ಮೊದಲ ಹಂತದಲ್ಲಿ ಈ ಬಗ್ಗೆ ಆಸಕ್ತಿಯಿಲ್ಲದಿದ್ದ ಜಿಲ್ಲೆ ಹಾಗೂ ಮಂಡಲದ ಲೀಗ್ ಪದಾ ಧಿಕಾರಿಗಳು  ಶಾಜಿಯವರ ಹೆಸರನ್ನು ಕಾಸರಗೋಡಿಗೆ ಪರಿಗಣಿಸಿದಾಗ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಸರಗೋಡು ಮಂಡಲಕ್ಕೆ ಆಮದು ಅಭ್ಯರ್ಥಿಯ ಅನಿವಾರ್ಯವಿಲ್ಲವೆಂದು ಪ್ರತಿಕ್ರಿಯಿಸಿದ್ದರು. ಇದೇ ಸಂದೇಶ ಒಳಗೊಂಡ ಪೋಸ್ಟರ್‌ಗಳು ನಗರದಲ್ಲಿ   ಪ್ರತ್ಯಕ್ಷಗೊಂಡಿದ್ದವು. ಅದರ ಮುಂಚೆಯೇ ಶಾಜಿಯನ್ನು ಕಾಸರಗೋಡಿಗೆ ಪರಿಗಣಿಸು ವುದನ್ನು ರಾಜ್ಯ ನಾಯಕತ್ವ  ಕೊನೆಗೊಳಿ ಸಿತ್ತು. ಬಳಿಕ ಮಂಡಲದಿಂದ ಒಬ್ಬರಿ ಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರು ಕೇಳಿ ಬಂದಿವೆ.  ಈ ಪೈಕಿ ಯಾರನ್ನೂ ತಿರಸ್ಕರಿಸಲಾಗದೆ ಅಸಹಾಯಕ ಸ್ಥಿತಿಯಲ್ಲಿ ರಾಜ್ಯ ನಾಯಕತ್ವ ಸಿಲುಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಂಡಲ, ಜಿಲ್ಲಾ ನಾಯಕತ್ವಕ್ಕೆ ಸೂಕ್ತ ನಾದ ಅಭ್ಯರ್ಥಿಯನ್ನು ಪತ್ತೆಹಚ್ಚಲು ಜಿಲ್ಲಾ ಪದಾಧಿಕಾರಿಗಳನ್ನು ಪಾಣಕ್ಕಾಡ್‌ಗೆ ಕರೆಸಲಾಗಿದೆ.

RELATED NEWS

You cannot copy contents of this page