ಮುಳ್ಳೇರಿಯ: ಡಾ| ಮನೋಹರ್ ದಂಪತಿಗೆ ಐಡಿಎ ಎಕ್ಸಲೆನ್ಸ್ ಅವಾರ್ಡ್

ಮುಳ್ಳೇರಿಯ: ಮುಳ್ಳೇರಿಯದ ಖ್ಯಾತ ದಂತ ವೈದ್ಯರಾದ ಡಾ|ಮನೋಹರ್ ಮುಳ್ಳಂಕೊಚ್ಚಿ ಮತ್ತು ಡಾ| ಅನುಪಮಾ ಮನೋಹರ್ ದಂಪತಿಗೆ ಭಾರತೀಯ ದಂತ ವೈದ್ಯಕೀಯ ಸಂಘ (ಐಡಿಎ)ದ ಕೇರಳ ರಾಜ್ಯ ಘಟಕ ನೀಡುವ ಪ್ರತಿಷ್ಠಿತ  ಐಡಿಎ ಎಕ್ಸಲೆನ್ಸ್  ಅವಾರ್ಡ್ 2026 ಪ್ರದಾನ ಮಾಡಲಾಯಿತು. ವೈದ್ಯಕೀಯ ರಂಗದಲ್ಲಿ ಈ ದಂಪತಿ ನಡೆಸುತ್ತಿರುವ ಸ್ತುತ್ಯರ್ಹ ಸೇವೆಯನ್ನು ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಕಲ್ಲಿಕೋಟೆಯ ಆಸ್ಟಿನ್  ಕೋರ್ಟ್ ಯಾರ್ಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಹಿರಿಯ ಕ್ಯಾನ್ಸರ್ ತಜ್ಞ ಡಾ| ವಿ.ಪಿ. ಗಂಗಾಧರನ್ ಮತ್ತು ಸಚಿವ   ಮೊಹಮ್ಮದ್ ರಿಯಾಸ್‌ರ ಉಪಸ್ಥಿತಿಯಲ್ಲಿ ಡಾ| ಮನೋಹರ್-ಡಾ| ಅನುಪಮ ಮನೋಹರ ದಂಪತಿಗೆ ಪ್ರಶಸ್ತಿ ಪ್ರದಾನಗೈದು, ಸನ್ಮಾನಿಸಿ ಗೌರವಿಸಲಾ ಯಿತು. ಇದೇ ಸಂದರ್ಭದಲ್ಲಿ ಸಾರ್ವ ಜನಿಕರ ಅನುಕೂಲಕ್ಕಾಗಿ ಐಡಿಎ ಸ್ಪರ್ಶ್ ಎಂಬ ನೂತನ ಮೊಬೈಲ್ ಆಪ್ ಹಾಗೂ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಯಿತು.

RELATED NEWS

You cannot copy contents of this page