ಬಿಜೆಪಿ ರೋಡ್‌ಶೋ 28ರಂದು: ತೇಜಸ್ವಿ ಸೂರ್ಯ ಬದಿಯಡ್ಕಕ್ಕೆ

ಬದಿಯಡ್ಕ: ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್.ರ ಪ್ರಚಾರಾರ್ಥ ಬೆಂಗಳೂರು ಸಂಸದ, ಯುವಮೋರ್ಛಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಈ ತಿಂಗಳ 28ರಂದು ಸಂಜೆ 4 ಗಂಟೆಗೆ ಬದಿಯಡ್ಕಕ್ಕೆ ತಲುಪುವರು. ಅಂದು ಬದಿಯಡ್ಕದಲ್ಲಿ ನಡೆಯುವ ರೋಡ್‌ಶೋದಲ್ಲಿ ಅವರು ಭಾಗವಹಿಸುವರು. ಬೋಳುಕಟ್ಟೆ ಮೈದಾನ ಬಳಿಯಿಂದ ಆರಂಭವಾಗುವ ರೋಡ್‌ಶೋ ಪೇಟೆ ಸುತ್ತಿ ಸಮಾಪ್ತಿಗೊಳ್ಳಲಿದೆ.

You cannot copy contents of this page