ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ 32 ಮಂದಿ ಸ್ಪರ್ಧಾಕಣದಲ್ಲಿ

ಕಾಸರಗೋಡು: ವಿಧಾನಸಭಾ ಚುನಾವಣೆಯ ಜಿಲ್ಲೆಯ 5 ಮಂಡಲಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ ೩೨ಕ್ಕೆ ಸೀಮಿತಗೊಂಡಿದೆ. ನಿನ್ನೆ ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದ್ದು, ಆ ಬಳಿಕ ಸ್ಪರ್ಧಾಕಣದಲ್ಲಿ 32 ಮಂದಿ ಉಳಿದುಕೊಂಡಿದ್ದಾರೆ. ಅತ್ಯಂತ ಹೆಚ್ಚು ಮಂದಿ ಸ್ಪರ್ಧಾಕಣದಲ್ಲಿ ಇರುವುದು ಮಂಜೇಶ್ವರ ಮಂಡಲದಲ್ಲಾಗಿದೆ. ಇಲ್ಲಿ 11 ಮಂದಿ ಸ್ಪರ್ಧಾಳುಗಳಿದ್ದರೆ, ಕಾಞಂಗಾಡ್ ಮಂಡಲದಲ್ಲಿ ಅತ್ಯಂತ ಕಡಿಮೆ (4) ಸ್ಪರ್ಧಾಳುಗಳಿದ್ದಾರೆ. ಮಂಜೇಶ್ವರದಲ್ಲಿ ಮೂರು ಮಂದಿ ನಾಮಪತ್ರ ಹಿಂತೆಗೆದಿದ್ದಾರೆ. ಎಸ್‌ಡಿಪಿಐಯ ಅಭ್ಯರ್ಥಿ ಕೆ.ಎಂ. ಅಶ್ರಫ್, ಸ್ವತಂತ್ರ ಅಭ್ಯರ್ಥಿಗಳಾದ ಮುಹಮ್ಮದ್ ರಫೀಕ್, ಎನ್. ಕೇಶವ ನಾಯಕ್ ನಾಮಪತ್ರ ಹಿಂತೆಗೆದವರಾಗಿದ್ದಾರೆ. ತೃಕರಿಪುರ ಮಂಡಲದಲ್ಲಿ ಟ್ವೆಂಟಿ-೨೦ ಅಭ್ಯರ್ಥಿ ರಮಣಿ ಕೆ.ವಿ., ಕಾಸರಗೋಡು ಮಂಡಲದಲ್ಲಿ ಸ್ವತಂತ್ರ ಅಭ್ಯರ್ಥಿ ಎಂ.ಎ. ಲತೀಫ್ ನಾಮಪತ್ರ ಹಿಂತೆಗೆದಿದ್ದಾರೆ. ಈಗ ವಿವಿಧ ಮಂಡಲಗಳಲ್ಲಿ ಉಳಿದಿರುವ ಅಭ್ಯರ್ಥಿಗಳು ಪಕ್ಷ ಚಿಹ್ನೆ ಕ್ರಮದಲ್ಲಿ ಈ ರೀತಿ ಇದೆ.

ಮಂಜೇಶ್ವರ ಮಂಡಲ:- ಎಕೆಎಂ ಅಶ್ರಫ್ (ಐಕ್ಯರಂಗ- ಏಣಿ), ಕೆ.ಆರ್. ಜಯಾನಂದ (ಸಿಪಿಎಂ- ಕತ್ತಿ ಸುತ್ತಿಗೆ ನಕ್ಷತ್ರ), ಸಂಜೀವ (ಬಹುಜನ ಸಮಾಜವಾದಿ ಪಕ್ಷ-ಆನೆ), ಕೆ. ಸುರೇಂದ್ರನ್ (ಬಿಜೆಪಿ- ತಾವರೆ), ಕಣ್ಣೂರು ಅಬ್ದುಲ್ಲ ಮಾಸ್ಟರ್ (ಸ್ವತಂತ್ರ- ಗ್ಯಾಸ್ ಸಿಲಿಂಡರ್), ಅಬ್ದುಲ್ ಲತೀಫ್ ಐ.(ಸ್ವತಂತ್ರ- ಟೆಲಿವಿಷನ್), ಜೀನ್ ಲವೀನ ಮೊಂತೇರೊ (ಸ್ವತಂತ್ರ-ಬ್ಯಾಟರಿ ಟಾರ್ಚ್), ಜೋನ್ ಡಿಸೋಜ (ಸ್ವತಂತ್ರ- ಟ್ರಕ್), ಮುಹಮ್ಮದ್ ಅಶ್ರಫ್ (ಸ್ವತಂತ್ರ- ಬ್ಯಾಟ್), ಮುಹಮ್ಮದ್ ಅಶ್ರಫ್ ಕೆ.ಎ. (ಸ್ವತಂತ್ರ-ಗ್ಯಾಸ್ ಸ್ಟವ್), ಡಿ. ಸುರೇಂದ್ರನ್ ನಾಯರ್ (ಸ್ವತಂತ್ರ-ಡೈಮಂಡ್).

ಕಾಸರಗೋಡು ಮಂಡಲ:- ಅಶ್ವಿನಿ ಎಂ.ಎಲ್ (ಬಿಜೆಪಿ -ತಾವರೆ), ಕಲ್ಲಟ್ರ ಮಾಹಿನ್ (ಮುಸ್ಲಿಂ ಲೀಗ್- ಏಣಿ), ಮುಹಮ್ಮದ್ ಅಲಿ ಫತಾಹ್ ಬಿ.ಎಂ. (ಸ್ವತಂತ್ರ-ಬ್ಯಾಟ್), ಶಾನವಾಸ್ ಎ.ಎ. (ಸ್ವತಂತ್ರ- ಡೈಮಂಡ್), ಶಾನವಾಸ್ ಪಾದೂರು (ಎಡಪಕ್ಷ ಬೆಂಬಲಿತ ಸ್ವತಂತ್ರ- ಬ್ಯಾಟರಿ ಟಾರ್ಚ್).

ಉದುಮ ಮಂಡಲ:- ಸಿ.ಎಚ್. ಕುಂಞಂಬು (ಸಿಪಿಎಂ- ಕತ್ತಿ ಸುತ್ತಿಗೆ ನಕ್ಷತ್ರ), ನೀಲಕಂಠನ್ (ಐಕ್ಯರಂಗ-ಕೈ), ಮನು ಲಾಲ್ (ಬಿಜೆಪಿ- ತಾವರೆ), ಕುಂಞಂಬು ಪಿ.ಪಿ. (ಸ್ವತಂತ್ರ- ಬೈನಾಕುಲರ್), ಕುಂಞಿರಾಮನ್ (ಸ್ವತಂತ್ರ- ಬ್ಯಾಟ್), ನಸೀರ್ (ಸ್ವತಂತ್ರ- ಡ್ರಿಲ್ ಮಿಷನ್).

ಹೊಸದುರ್ಗ ಮಂಡಲ:- ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್ (ಸಿಪಿಐ- ಕತ್ತಿ ತೆನೆ), ಎಂ. ಬಲರಾಜ್ (ಬಿಜೆಪಿ-ತಾವರೆ), ವಿಜಯಕುಮಾರ್ ಬಿ. (ಬಹುಜನ ಸಮಾಜವಾದಿ- ಆನೆ), ಶೈಜಿ ಓಟಪ್ಪಳ್ಳಿ (ಕೇರಳ ಕಾಂಗ್ರೆಸ್- ಆಟೋರಿಕ್ಷಾ).

ತೃಕರಿಪುರ ಮಂಡಲ :- ಮುಸ್ತಫ ಪಿ.ಪಿ. (ಸ್ವತಂತ್ರ- ಕತ್ತರಿ), ಮುಸ್ತಫ ವಿ.ಪಿ. (ಸ್ವತಂತ್ರ- ಚೈನ್), ರವಿ ಕುಳಂಗರ (ಟ್ವೆಂಟಿ-೨೦- ಹಲಸು), ಸಂದೀಪ್ ಏಳಾಟ್ (ಸ್ವತಂತ್ರ- ಗ್ಯಾಸ್ ಸಿಲಿಂಡರ್), ಸಂದೀಪ್ ವಾರ್ಯರ್ (ಐಕ್ಯರಂಗ- ಕೈ), ಡಾ. ವಿ.ಪಿ.ಪಿ. ಮುಸ್ತಫ (ಸಿಪಿಎಂ- ಕತ್ತಿ ಸುತ್ತಿಗೆ ನಕ್ಷತ್ರ).

You cannot copy contents of this page