ಕಾಸರಗೋಡಿಗೆ ಕಾರಿನಲ್ಲಿ ಸಾಗಿಸುತ್ತಿದ್ದ 285 ಲೀಟರ್ ಕರ್ನಾಟಕ ಮದ್ಯ ವಶ: ಸಾಗಾಟಗಾರ ಪರಾರಿ

ಕಾಸರಗೋಡು: ಕಾಸರಗೋಡು ಭಾಗಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ 285.12 ಲೀಟರ್ ಕರ್ನಾಟಕ ಮದ್ಯವನ್ನು  ಅಬಕಾರಿ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಕಾರಿನಲ್ಲಿದ್ದ ವ್ಯಕ್ತಿ ಓಡಿ ಪರಾರಿಯಾ ಗಿದ್ದಾನೆ. ಆತನ ಪತ್ತೆಗಾಗಿ  ತನಿಖೆ ತೀವ್ರ ಗೊಳಿಸಲಾಗಿದೆ.  ಇಲೆಕ್ಷನ್ ಸ್ಪೆಷಲ್ ಡ್ರೈವ್‌ನಂಗವಾಗಿ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಪ್ರಿವೆಂಟೀವ್ ಆಫೀಸರು ರಂಜಿತ್ ಕೆ.ವಿನೇತೃತ್ವದ ತಂಡ ನಿನ್ನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆಸಿದ ಕಾರ್ಯಾಚರಣೆ ವೇಳ ಮದ್ಯ ಸಾಗಾಟ ಪತ್ತೆಯಾಗಿದೆ. ಕುಂಬಳೆ ಭಾಗದಿಂದ ಬಂದ ಕಾರನ್ನು ಅಬಕಾರಿ ಅಧಿಕಾರಿಗಳು ತಡೆದು ನಿಲ್ಲಿಸಿದ್ದು, ಈ ವೇಳೆ  ಕಾರಿನಲ್ಲಿದ್ದ ವ್ಯಕ್ತಿ ಓಡಿ ಪರಾರಿಯಾಗಿದ್ದಾನೆ. ಇದರಿಂದ ಕಾರನ್ನು ಪರಿಶೀಲಿಸಿದಾಗ ಕರ್ನಾಟಕ ದಲ್ಲಿ ಮಾತ್ರ ಮಾರಾಟಗೈಯ್ಯಬಹು ದಾದ ಭಾರೀ ಪ್ರಮಾಣದ ಮದ್ಯ ಪತ್ತೆ ಯಾಗಿದೆ. ಕಾರಿನಿಂದ ಓಡಿ ಪರಾರಿ ಯಾದ ವ್ಯಕ್ತಿನಿರಂತರ ಕಾಸರಗೋಡು ಜಿಲ್ಲೆಯ ಹಲವು ಭಾಗಗಳಿಗೆ ಮದ್ಯ ಸಾಗಿಸುವ ತಂಡದ ಕೊಂಡಿಯಾಗಿದ್ದಾ ನೆಂದು ಸಂಶಯಿಸಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.ಕಾರಿನ ಆರ್.ಸಿ ಮಾಲಕನನ್ನು ಸಂಪರ್ಕಿಸಿ ತನಿಖೆ ಮುಂದುವರಿಸಲಾಗಿದೆ.

ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ರಮೇಶನ್ ಆರ್, ಸಿಪಿಲ್ ಎಕ್ಸೈಸ್ ಆಫೀಸರ್ ಗಳಾದ ಅತುಲ್ ಟಿ.ವಿ, ಶೈಲೇಶ್ ಕುಮಾರ್ ಪಿ, ರಾಜೇಶ್ ಪಿ, ಮಂಜುನಾಥನ್ ವಿ,ಮೋಹನ್ ಕುಮಾರ್ ಎಲ್, ಸಿವಿಲ್ ಎಕ್ಸೈಸ್ ಆಫೀಸರ್ ಚಾಲಕರಾದ ಕ್ರಿಸ್ಟಿನ್ ಪಿ.ಎ, ಮಹೇಶ್ ಪಿ.ವಿ ಎಂಬಿವರಿದ್ದರು.

RELATED NEWS

You cannot copy contents of this page