ಕುಂಬಳೆ: ಗ್ಯಾರೇಜ್‌ಗೆ ಕಿಚ್ಚಿಡುವಿಕೆ ಹಾಗೂ ತಲವಾರು ಬೀಸಿ ಭೀತಿ ಸೃಷ್ಟಿಸಿ ವ್ಯಕ್ತಿಗಳಿಗೆ ಇರಿದು ಗಾಯಗೊಳಿಸಿದ ಪ್ರಕರಣ ಸಹಿತ ೨೦ರಷ್ಟು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾದ ಉಪ್ಪಳದ ಮೀಸೆ ರೌಫ್ ಯಾನೆ ಪಿ.ಕೆ. ಅಬ್ದುಲ್ ರೌಫ್ (43)ನನ್ನು ಮುಂಬೈಯಿಂದ ಬಂಧಿಸಲಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಪ್ರತ್ಯೇಕ ತನಿಖಾ ತಂಡ ಹಾಗೂ ಕುಂಬಳೆ ಪೊಲೀಸರು ಸಂಯುಕ್ತವಾಗಿ ನಡೆಸಿದ ಬೃಹತ್ ಕಾರ್ಯಾಚರ ಣೆಯಲ್ಲಿ ಆರೋಪಿಯನ್ನು ಸೆರೆಹಿಡಿಯಲು ಸಾಧ್ಯವಾಗಿದೆ.
ಕಾಸರಗೋಡು, ವಿದ್ಯಾನಗರ, ಮಂಜೇಶ್ವರ,ಕುಂಬಳೆ ಪೊಲೀಸ್ ಠಾಣೆಗಳಲ್ಲಾಗಿ ಈತನ ವಿರುದ್ಧ 20ರಷ್ಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಪೆರ್ಮುದೆಯ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಕಿಚ್ಚಿರಿಸಿದ್ದು ಮಾತ್ರವಲ್ಲದೆ ಅದರ ಮರುದಿನ ಕಾರಿನ ಗಾಜುಗಳನ್ನು ಹೊಡೆದು ಪುಡಿಗೈದ ಪ್ರಕರಣಗಳಲ್ಲೂ ಅಬ್ದುಲ್ ರೌಫ್ ಆರೋಪಿಯಾಗಿದ್ದಾನೆಂದು ಪೊಲೀಸರು ಸಂಶಯಿಸುತ್ತಿದ್ದಾರೆ. ಕುಂಬಳೆ ಠಾಣೆಗೆ ತಲುಪಿಸಿ ಸಮಗ್ರ ತನಿಖೆಗೊಳಪಡಿಸಿದ ಬಳಿಕ ಆರೋಪಿಯನ್ನು ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಗಿದೆ. ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ.
ಪೆರ್ಮುದೆಯಲ್ಲಿ ಗ್ಯಾರೇಜ್‌ಗೆ ಕಿಚ್ಚಿಟ್ಟ ಘಟನೆ ಹಾಗೂ ಮಾರಕಾ ಯುಧ ಉಪಯೋಗಿಸಿ ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಪ್ರಕರಣಗಳ ಬೆನ್ನಲ್ಲೇ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಈಮಧ್ಯೆ ಆರೋಪಿ ಮುಂಬೈಗೆ ಪರಾರಿಯಾಗಿರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿತ್ತು. ಆರೋಪಿ ಸಂಚರಿಸಲು ಸಾಧ್ಯತೆಯಿರುವ ಪ್ರದೇಶಗಳ 100ರಷ್ಟು ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿ ಸೈಬರ್ ಸೆಲ್‌ನ ಸಹಾಯದೊಂದಿಗೆ ಮೊಬೈಲ್ ಟವರ್ ಕೇಂದ್ರೀಕರಿಸಿ ಮಾಹಿತಿಗಳನ್ನು ಪರಿಶೀಲಿಸಿ ನq ಸಿದ ವೈಜ್ಞಾನಿಕ ತನಿಖೆಯಲ್ಲಿ ಆರೋಪಿ ಮುಂಬೈಗೆ ಪರಾರಿ ಯಾಗಿ ರುವುದಾಗಿ ಮಾಹಿತಿ ಲಭಿಸಿತ್ತು. ಇದರಂತೆ ತನಿಖಾ ತಂಡ ಮುಂಬೈಗೆ ತಲುಪಿ ನಡೆಸಿದ ಕಾರ್ಯಾಚರಣೆ ಯಲ್ಲಿ ಆರೋಪಿ ಯನ್ನು ಅತೀ ಸಾಹಸಿಕವಾಗಿ ಸೆರೆಹಿಡಿಯಲಾಗಿದೆ. ಆಕ್ರಮಣ ನಡೆಸಿದ ಬಳಿಕ ತಲೆಮರೆಸಿಕೊಳ್ಳುವುದು ಅಬ್ದುಲ್ ರೌಫ್‌ನ ರೀತಿಯಾಗಿದೆ. ಈತ ಬೈಕ್ ಕಳವು ಪ್ರಕರಣಗಳಲ್ಲೂ ಆರೋಪಿ ಯಾಗಿದ್ದಾನೆ. ಈ ಹಿಂದೆ ಈತನ ವಿರುದ್ಧ ಕಾಪಾ ಪ್ರಕಾರ ಕೇಸು ದಾಖ ಲಿಸಿ ಗಡಿಪಾರು ಮಾಡಲಾಗಿತ್ತು.






