ಚಿಪ್ಪಾರು ಕುರುಡಪದವು ಭಾಗದ ಜನರಿಗೆ: ಸಂಚಾರ ಸಮಸ್ಯೆ: ಶೀಘ್ರ ಪರಿಹರಿಸಲು ಆಗ್ರಹ

ಪೈವಳಿಕೆ: ಚಿಪ್ಪಾರು, ಕುರುಡಪದವು, ಖಂಡಿಗೆ, ಸುಂಕದಕಟ್ಟೆ, ಗೋಳಿಕಟ್ಟೆ ಮೊದಲಾದ ಪ್ರದೇಶದ ಜನರು ಬಸ್ ಸೌಕರ್ಯದ ಕೊರತೆಯಿಂದ ಸಂಕಷ್ಟಕ್ಕೀಡಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ವಿಟ್ಲ- ಬೇಡಗುಡ್ಡೆ, ಉಪ್ಪಳ- ಕುರುಡಪದವು ರೂಟ್‌ನಲ್ಲಿ ಬಸ್ ಸಂಚಾರ ಸರಿಯಾಗಿ ಇಲ್ಲದಿರುವ ಕಾರಣ ಈ ಭಾಗದ ಜನರ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ವಿಟ್ಲದಿಂದ ಆಗಮಿಸುವ ಬಸ್‌ಗಳು ಕೆಲವೊಮ್ಮೆ ಲಾಲ್‌ಭಾಗ್‌ನಿಂದಲೇ ಟ್ರಿಪ್ ಮೊಟಕುಗೊಳಿಸಿ ಸಂಚರಿಸುತ್ತಿರು ವುದಾಗಿಯೂ ದೂರಲಾಗಿದೆ.

ಬೆಳಿಗ್ಗಿನ ಹೊತ್ತು ಬೇಡಗುಡ್ಡೆಯಿಂದ ಒಂದು ಬಸ್ ವಿಟ್ಲಕ್ಕೆ ತೆರಳುತ್ತಿದ್ದು, ಇದು ಕೊನೆಯ ಟ್ರಿಪ್ ರಾತ್ರಿ ವೇಳೆ ಹಿಂತಿರುಗುತ್ತಿದೆ. ಉಪ್ಪಳದಿಂದ  ಆಗಮಿಸುವ ಬಸ್‌ಗಳು ಕೂಡಾ ಕೆಲವೊಮ್ಮೆ ಕುರುಡಪದವುವರೆಗೆ ಸಂಚರಿಸುವುದಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಇದರಿಂದಾಗಿ ಈ ಪ್ರದೇಶದ ಜನರು ತಮ್ಮ ಅಗತ್ಯಗಳಿಗಾಗಿ ವಿವಿಧ ಕಡೆಗಳಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಇದೇ ವೇಳೆ ಈ ರೂಟ್‌ನ ಸ್ಟೇಜ್ ವ್ಯವಸ್ಥೆ ಕೂಡಾ ಸರಿಯಿಲ್ಲವೆಂದು ಅಧಿಕ ದರ ನೀಡಬೇಕಾಗಿ ಬರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page