ಕಾಸರಗೋಡು: ಮಧೂರು ಪಂಚಾಯತ್ ಸದಸ್ಯ ಹಾಗೂ ಮುಸ್ಲಿಂ ಲೀಗ್ ಮುಖಂಡನಾಗಿದ್ದ ಮಜೀದ್ ಪಟ್ಲ (56) ನಿಧನ ಹೊಂದಿದರು. ದಿ| ಎಂ.ಎ. ಮೊಯ್ದೀನ್ ಕುಂಞಿ- ದಿ| ಆಸ್ಯಮ್ಮ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಮೈಮೂನ, ಮಕ್ಕಳಾದ ಮೊಯ್ದೀನ್ ಮಿಸ್ಯಾನ್, ಆಸಿಯಾ ಮಿನ್ನತ್, ಸೊಸೆ ಹವ್ವಾ ಜುಮಾನ, ಸಹೋದರರಾದ ಎಂ.ಎ. ಅಬ್ದುಲ್ಲ, ಎಂ.ಎ. ಅಶ್ರಫ್, ಸಹೋದರಿಯರಾದ ಖದೀಜ, ಆಯಿಷಾ, ಸಫಿಯ, ಫಾಮ್ಸೀನ, ಫೌಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮಧೂರು ಪಂಚಾಯತ್ ದ್ವಿತೀಯ ವಾರ್ಡ್ ಸದಸ್ಯ, ಮುಸ್ಲಿಂ ಲೀಗ್ ಮಧೂರು ಪಂ. ಸಮಿತಿ ಪ್ರಧಾನ ಕಾರ್ಯದರ್ಶಿ ಸಂಯುಕ್ತ ಜಮಾಯತ್ ಜೊತೆ ಕಾರ್ಯದರ್ಶಿ ಎಂಬೀ ಹುದ್ದೆಗಳನ್ನು ನಿರ್ವಹಿಸಿದ್ದರು.






