ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಸಮೀಪ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಸೃಷ್ಟಿಸುವ ರೀತಿಯಲ್ಲಿ ಇರಿಸಲಾದ ಡಿವೈಡರ್ ಗಳನ್ನು ಇಂದು ರಾತ್ರಿಯೊಳಗೆ ತೆರವುಗೊ ಳಿಸ ಬೇಕೆಂದೂ ಇಲ್ಲದಿದ್ದಲ್ಲಿ ಅನಿರ್ಧಿ ಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಕುಂಬಳೆಯಲ್ಲಿ ನಿನ್ನೆ ನಡೆದ ಬಸ್ ಮಾಲಕರ ಹಾಗೂ ನೌಕರರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ನಿರ್ಧಾರವನ್ನು ಪೊಲೀಸರಿಗೆ ತಿಳಿಸಲಾ ಗಿದೆ. ಡಿವೈಡರ್‌ಗಳನ್ನು ತೆರವುಗೊಳಿಸ ದಿದ್ದಲ್ಲಿ ಕಾಸರಗೋಡು-ತಲಪ್ಪಾಡಿ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಪ್ರಮಾಣಿಕರನ್ನು ಇಳಿಸಿ ಸಂಚಾರ ಮುಂದುವರಿಸಲಿವೆ. ಅದೇ ರೀತಿ ಸೀತಾಂಗೋಳಿ ಭಾಗದಿಂದ ಕುಂಬಳೆಗೆ ತೆರಳುವ ಖಾಸಗಿ ಬಸ್‌ಗಳು ಅನಿಲ್ ಕುಂಬಳೆ ರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಮರಳಲಿವೆಯೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಕುಂಬಳೆ ಶಾಲೆಯಲ್ಲಿ ಇತ್ತೀಚೆಗೆ ನಡೆದ ಉಪಜಿಲ್ಲಾ ಶಾಲಾ ಕ್ರೀಡಾಕೂಟದಂಗವಾಗಿ ಸಂಚಾರಕ್ಕೆ ತೊಡಕುಂಟಾಗದಿರಲೆಂಬ ಹೆಸರಲ್ಲಿ ನಾಲ್ಕು ದಿನಗಳ ಕಾಲಕ್ಕೆ ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಡಿವೈಡರ್‌ಗಳನ್ನಿರಿ ಸಲಾಗಿತ್ತು. ಕ್ರೀಡಾಕೂಟ ಮುಗಿದ ತಕ್ಷಣ ಡಿವೈಡರ್ ತೆರವುಗೊಳಿಸು ವುದಾಗಿ ಪೊಲೀಸರು ಬಸ್ ನೌಕರರಿಗೆ ಭರವಸೆ ನೀಡಿದ್ದರು. ಆದರೆ ಕ್ರೀಡಾಕೂಟ ಮುಗಿದರೂ ಡಿವೈಡರ್‌ಗಳನ್ನು ತೆರವುಗೊಳಿಸಲಿಲ್ಲ. ಮಾತ್ರವಲ್ಲದೆ ಹೆಚ್ಚುವರಿಯಾಗಿ ಕಾಂಕ್ರೀಟ್‌ನಿಂದ ನಿರ್ಮಿಸಿದ ಡಿವೈಡರ್‌ಗಳನ್ನು ರಸ್ತೆಯಲ್ಲಿರಿಸ ಲಾಗಿದೆ. ಇದು ವಿವಾದಕ್ಕೆಡೆಮಾಡಿಕೊಟ್ಟಿದೆ. ಇದೇ ವೇಳೆ ರಸ್ತೆಯಲ್ಲಿ ಡಿವೈಡರ್‌ಗಳ ನ್ನಿರಿಸಲು ನೇತೃತ್ವ ನೀಡಿದವರು ಪಂಚಾಯತ್ ಅಧ್ಯಕ್ಷ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ, ಯೂತ್ ವಿಂಗ್ ಪದಾಧಿಕಾರಿಗಳಾಗಿದ್ದಾರೆಂದು ಸ್ಪಷ್ಟಗೊಂಡಿದೆ. ಎಲ್ಲೋ ಇರಿಸಿದ್ದ ಕಾಂಕ್ರೀಟ್ ಡಿವೈಡರ್‌ಗಳನ್ನು ಲಾರಿಯಲ್ಲಿ ತಂದು ಕ್ರೇನ್ ಬಳಸಿ ಇಳಿಸಿ ರಸ್ತೆಯಲ್ಲಿ ಇಳಿಸುವ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಪಂಚಾಯತ್ ಅಧ್ಯಕ್ಷ, ಇಬ್ಬರು ಸ್ಥಾಯೀ ಸಮಿತಿ ಅಧ್ಯಕ್ಷರು, ವ್ಯಾಪಾರಿ ಸಂಘಟನೆಯ ಪದಾಧಿಕಾರಿಗಳಿ ದ್ದಾರೆಂದು ವ್ಯಾಪಾರಿಗಳೇ ತಿಳಿಸಿದ್ದಾರೆ. ವ್ಯಾಪಾರಿಗಳೇ ಈ ದೃಶ್ಯವನ್ನು ಚಿತ್ರೀಕರಿಸಿ ವ್ಯಾಪಾರಿಗಳ ವಾಟ್ಸಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದರು. ಕೆಎಸ್‌ಟಿಪಿ ನಿಯಂತ್ರಣದಲ್ಲಿರುವ ರಸ್ತೆಯಲ್ಲಿ ಅನಧಿಕೃತವಾಗಿ ಅಡಚಣೆ ಸೃಷ್ಟಿಸಲಾಗಿದೆ. ಈ ರಸ್ತೆಯಲ್ಲಿ ಡಿವೈಡರ್ ಇರಿಸಿ ಸಾರಿಗೆ ಅಡಚಣೆ ಸೃಷ್ಟಿಸಲು ಪಂಚಾಯತ್‌ಗೆ ಯಾವುದೇ ಅಧಿಕಾರವಿಲ್ಲವೆಂದು ಲೋಕೋಪಯೋಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಿರುವಾಗ ಈ ವಿಷಯದಲ್ಲಿ ಅಧಿಕಾರಿಗಳು ಮೌನ ವಹಿಸುತ್ತಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದರ ವಿರುದ್ಧ ವಿವಿಧ ಸಂಘಟನೆಗಳು, ವ್ಯಕ್ತಿಗಳು ದೂರು ನೀಡಲು ಮುಂದಾಗಿದ್ದಾರೆ.






