ಮನೆಯಿಂದ ಯುವಕ ನಾಪತ್ತೆ-ದೂರು

ಮಂಜೇಶ್ವರ: ಮನೆಯಿಂದ ಯುವಕನೋರ್ವ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಶ್ರೀ ಅನಂತೇಶ್ವರ ಕ್ಷೇತ್ರ ಬಳಿಯ ಮಂಜೇಶ್ವರ ಪೊಲೀಸ್ ಠಾಣಾ ಪರಿಸರ ನಿವಾಸಿ ಅಶೋಕ್ ಶೆಣೈ (46) ಎಂಬವರು ನಾಪತ್ತೆಯಾಗಿದ್ದಾರೆ. ಈ ತಿಂಗಳ 22ರಂದು ಮುಂಜಾನೆ 6 ಗಂಟೆ ವೇಳೆ ಮನೆಯಿಂದ ನಾಪತ್ತೆಯಾಗಿದ್ದು, ವಿವಿಧ ಕಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಹೊಸಂಗಡಿ ಕಟ್ಟದವೊಂದರ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬೆಳಿಗ್ಗೆ 6.20ರ ವೇಳೆ ಹೊಸಂಗಡಿಯಲ್ಲಿರುವ ದೃಶ್ಯ ಕಂಡು ಬಂದಿರುವುದಾಗಿ ಮನೆಯವರು ತಿಳಿಸಿದ್ದಾರೆ. ಇವರ ಸಹೋದರ ಅಶ್ವಿನ್ ಕೆ. ಶೆಣೈ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇವರನ್ನು ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡಲು ವಿನಂತಿಸಿದ್ದಾರೆ.

You cannot copy contents of this page