ಎಡರಂಗದಿಂದ ಹೊಸಂಗಡಿಯಲ್ಲಿ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರಕಾರದ ತಪ್ಪಾದ ನಿರ್ಧಾರದಿಂದ ದೇಶದಲ್ಲಿ ಅಡುಗೆ ಅನಿಲ ಕ್ಷಾಮ ಉಂಟಾಗಿದೆ. ಇದರಿಂದ ನಗರ, ಗ್ರಾಮ ಪ್ರದೇಶದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಲವಾರು ಹೋಟೆಲ್ ಮುಚ್ಚಿದರಿಂದ ಆಹಾರ ಸಿಗದೆ ಜನರು ಪರದಾಡುವ ಪರಿಸ್ಥಿತಿ ಬಂದಿದೆ.

ಇದಕ್ಕೆದುರಾಗಿ ಜನತೆ ಬೀದಿಗಿಳಿದು ಪ್ರತಿಭಟಿಸಬೇಕೆಂದು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಕರೆ ನೀಡಿದ್ದಾರೆ. ಅಡುಗೆ ಅನಿಲ ಕ್ಷಾಮದ ಹಿನ್ನೆಲೆಯಲ್ಲಿ ಹೊಸಂಗಡಿಯಲ್ಲಿ ನಡೆದ ಪ್ರತಿಭಟನೆ ಉದ್ಘಾಟಿಸಿ ಅವರು ಮಾತನಾಡಿದರು. ಅಡುಗೆ ಅನಿಲ ಕ್ಷಾಮದ ವಿರುದ್ಧ ಒಲೆ ಉರಿಸಿ ಚಹಾ ತಯಾರಿಸಿ ಪ್ರತಿಭಟನೆ ನಡೆಸಲಾಯಿತು. ಸಿಪಿಐ ನೇತಾರ ರಾಮಚಂದ್ರ ಬಡಾಜೆ ಅಧ್ಯಕ್ಷತೆ ವಹಿಸಿದ್ದರು. ಕರುಣಾಕರ ಶೆಟ್ಟಿ ಪ್ರಣವ್, ಶರತ್, ಕಮಲಾಕ್ಷ ಕನಿಲ ಮೊದಲಾದವರು ಉಪಸ್ಥಿತರಿದ್ದರು. ಪ್ರಶಾಂತ್ ಕನಿಲ ಸ್ವಾಗತಿಸಿದರು.

You cannot copy contents of this page