ಅಲಂಕೃತಗೊಂಡ ಅಡ್ಕತ್ತಬೈಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪುನಃಪ್ರತಿಷ್ಠಾ ವಾರ್ಷಿಕ ದಿನಾಚರಣೆ ಆರಂಭ

ಕಾಸರಗೋಡು: ಅಡ್ಕತ್ತಬೈಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಹೊಸಮನೆಯಲ್ಲಿ ಪುನಃಪ್ರತಿಷ್ಠಾ ವಾರ್ಷಿಕ ದಿನಾಚರಣೆ, ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವ ಇಂದು ಆರಂಭಗೊಂಡಿತು.

ಇಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ಮುಡಿಪು ಶುದ್ಧಿ (ಪಾನಕ ಪೂಜೆ) ನಡೆಯಿತು. ಬಳಿಕ ನಾಗತಂಬಿಲ, ಬ್ರಹ್ಮೆರ್, ದೇಯಿ ಬೈದ್ಯೆತಿ, ಕೋಟಿಚೆನ್ನಯ್ಯ ಹಾಗೂ ಇತರ ದೈವಗಳಿಗೆ ಪೂಜಾ ಕಾರ್ಯಕ್ರಮಗಳು, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ರಿಂದ ವಿದ್ಯಾಶ್ರಯ ಭಜನ್ಸ್ ಮಜಲ್ ಇವರಿಂದ ಭಜನೆ, ರಾತ್ರಿ 7ಕ್ಕೆ ಸಂಧ್ಯಾಪೂಜೆ, ೮ಕ್ಕೆ ಗುಳಿಗ ದೈವಕೋಲ, ಕೊರತಿಅಮ್ಮನ ಕೋಲ, ಅನ್ನಸಂತರ್ಪಣೆ ನಡೆಯಲಿದೆ.

ನಾಳೆ ಬೆಳಿಗ್ಗೆ 8ಕ್ಕೆ ಮಹಾಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಬೈದರ್ಕಳ ಪ್ರದರ್ಶನ, 7ಕ್ಕೆ ಬ್ರಹ್ಮಬಲಿ ಮತ್ತು ಬೈದರ್ಕಳ ರಂಗಸ್ಥಳಕ್ಕೆ ಇಳಿಯುವುದು, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ, 12 ಗಂಟೆಗೆ ಆಯುಧ ಒಪ್ಪಿಸುವಿಕೆ, 2ರಂದು ಪ್ರಾತಃಕಾಲ 3 ಗಂಟೆಗೆ ಮಾಯಂದಾಳ ದೇವಿಯ ಪ್ರದರ್ಶನ, 4ಕ್ಕೆ ಪೂಜಾರಿಗಳ ಸೇಟ್, ಬೆಳಿಗ್ಗೆ 6ಕ್ಕೆ ಬೈದರ್ಕಳ ಸೇಟ್, 7 ಗಂಟೆಗೆ ಪ್ರಸಾದ ವಿತರಣೆ, ಹರಕೆ ಒಪ್ಪಿಸುವುದು ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ.

You cannot copy contents of this page