ಮಲಯಾಳಂ ಭಾಷಾ ಮಸೂದೆ ತಿದ್ದುಪಡಿಗೆ ಆಗ್ರಹಿಸಿ ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು ಸಭೆ

ಕಾಸರಗೋಡು: ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಾ ಅಲ್ಪ ಸಂಖ್ಯಾತರನ್ನು ಹೊರತು ಪಡಿಸಲು ಆಗ್ರಹಿಸಿ, ಮುಂದಿನ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಚುನಾಯಿತರಾದ ನೂತನ ಆಡಳಿತ ಸಮಿತಿ ಒಮ್ಮತದಿಂದ ಈ ಮಸೂದೆಯನ್ನು ಮರು ಪರಿಶೀಲಿಸಿ ಸೂಕ್ತ ತಿದ್ದುಪಡಿ ಯೊಂದಿಗೆ ಪುನ: ಅನುಷ್ಠಾನಗೊಳಿಸಬೇಕೆಂದು ಕಾಸರಗೋಡು ಪ್ರದೇಶದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒಗ್ಗೂಡಿ ‘ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು’ ಮೂಲಕ ಮನವಿ ಸಿದ್ಧಪಡಿಸಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಯಿತು.
ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ದಿಕ್ಸೂಚಿ ಭಾಷಣ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆ ತ್ಹೋಡಿ,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯ್ಯ ಕಟ್ಟೆ, ಕೆ.ಎನ್ ವೆಂಕಟ್ರಮಣ ಹೊಳ್ಳ, ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು,ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ್ ಎ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲೆ, ಕರ್ನಾಟಕ ಸಂಗ್ರಾಮ ಸೇನೆ ರಾಜ್ಯಾಧ್ಯಕ್ಷ ಸಂಜಿವ ದುಮಕನಾಳ, ಜಯಾನಂದ ಕುಮಾರ್ ಹೊಸದುರ್ಗ, ವೆಂಕಟ್ ಭಟ್ ಎಡನೀರು, ಕರ್ನಾಟಕ ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಕೆ. ಸತ್ಯನಾರಾಯಣ ತಂತ್ರಿ, ಹರೀಶ್ ಸುಲಾಯ ಒಡ್ಡoಬೆಟ್ಟು ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಟಿ.ಶಂಕರ ನಾರಾಯಣ ಭಟ್, ಪತ್ರಕರ್ತ ವಿರಾಜ್ ಆಡೂರು, ಪುರುಷೋತ್ತಮ ಪೆರ್ಲ, ಪುರುಷೋತ್ತಮ ಭಟ್, ಪ್ರದೀಪ್ ಬೇಕಲ್, ಮಾಜಿ ಕೌನ್ಸಿಲರ್ ಕೆ. ವರಪ್ರಸಾದ್ ಕೋಟೆಕಣೆ, ಕೆ. ಗುರುಪ್ರಸಾದ್ ಕೋಟೆಕಣಿ, ಜಿಲ್ಲಾ ಕನ್ನಡ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಗಡಿನಾಡ ಕಲಾವಿದರು ಸಂಸ್ಥೆಯ ಉಪಾಧ್ಯಕ್ಷ ದಿವಾಕರ ಪಿ. ಅಶೋಕನಗರ, ನ್ಯಾಯವಾದಿ ಪರಿಮಳ ರಾವ್ ಕೆ. ಮಂಗಳೂರು, ಡಾ.ವಾಣಿಶ್ರೀ ಕಾಸರಗೋಡು, ಶ್ರೀಕಾಂತ ಕಾಸರಗೋಡು ಮಾತನಾಡಿದರು.. ಮಾಜಿ ಕೌನ್ಸಿಲರ್ ಶಂಕರ ಕೆ ಸ್ವಾಗತಿಸಿದರು. ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ ಕೂಡ್ಲು ನಿರೂಪಿಸಿದರು. ದಿವ್ಯಾಗಟ್ಟಿ ಪರಕ್ಕಿಲ ಸಮನ್ವಯಕಾರಕರಾಗಿ ಸಹಕರಿಸಿದರು.

RELATED NEWS

You cannot copy contents of this page