ಸ್ವಾತಿ ಕಲ್ಲಗ ಅವರಿಗೆ ಡಾಕ್ಟರೇಟ್

ಮುಳರಿಯ: ಕಂಪ್ಯೂಟರ್ ಸಯನ್ಸ್‌ಗೆ ಸಂಬಂಧಿಸಿ ಸಂಶೋಧನಾ ಪ್ರಬಂಧ ಮಂಡಿಸಿದ ಬೆಳ್ಳೂರು ಕಲ್ಲಗದ ಸ್ವಾತಿ.ಕೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ  ಗೌರವಿಸಿದೆ. ಸ್ವಾತಿಯವರು ಮಂಡಿಸಿದ ‘ಅಲ್ಗೋರಿಥಮ್ಸ್ ಫಾರ್ ಅಥೆಂಟಿಕೇಶನ್ ಆಫ್ ಡಿಜಿಟಲ್ ಟ್ರಾನ್ಸಾಕ್ಷನ್ಸ್ ಬೇಸ್ಡ್ ಆನ್ ಮಲ್ಟಿ ಬಯೋಮೆಟ್ರಿಕ್ಸ್’ ಎಂಬ ಮಹಾ ಪ್ರಬಂಧವನ್ನು  ಸ್ವೀಕರಿಸಿ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ. ಮಂಗಳೂರು ವಿ.ವಿಯ ಹಿರಿಯ ಪ್ರಾಧ್ಯಾಪಕ ಡಾ. ಬಿ.ಎಚ್. ಶೇಖರ್‌ರ ಮಾರ್ಗದರ್ಶನದಲ್ಲಿ ಪ್ರಬಂಧ ರಚಿಸಲಾಗಿದೆ.ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆಯಾಗಿರುವ ಡಾ. ಸ್ವಾತಿಯವರು ಸಾಮಾಜಿಕ, ಧಾರ್ಮಿಕ ಮುಖಂಡ ಕಲ್ಲಗ ಚಂದ್ರಶೇಖರ ರಾವ್-ಜಯಂತಿ ದಂಪತಿಯ ಪುತ್ರಿಯೂ,ಕಾರ್ಕಳ  ನಿವಾಸಿ, ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಧ್ಯಾಪಕರಾದ ನಂದಕಿಶೋರ್ ಕೆ ಅವರ ಪತ್ನಿಯೂ ಆಗಿದ್ದಾರೆ. ಸ್ವಾತಿಯವರು ಸುಳ್ಯಪದವು ಸರ್ವೋದಯ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.

RELATED NEWS

You cannot copy contents of this page