ಅಬಕಾರಿ ಪ್ರಕರಣ: ಹಲವು ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಬಂಧನ

ಕುಂಬಳೆ: ಅಬಕಾರಿ ಪ್ರಕರಣ ದಲ್ಲಿ  ಆರೋಪಿಯಾಗಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಅತೀ ಸಾಹಸಿಕವಾಗಿ ಸೆರೆಹಿಡಿದಿದ್ದಾರೆ.

ಹೊಸಂಗಡಿ ನಿವಾಸಿಯಾದ ಪ್ರಶಾಂತ್ (44) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತನನ್ನು ನಿನ್ನೆ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್‌ರ ನೇತೃತ್ವದಲ್ಲಿ  ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಚಂದ್ರನ್, ಕಿಶೋರ್, ಉದಯನ್ ಎಂಬಿವರು ತೊಕ್ಕೋಟಿನಿಂದ ಬಂಧಿಸಿದ್ದಾರೆ.

2006ರಲ್ಲಿ ದಾಖಲಾದ ಅಬಕಾರಿ ಪ್ರಕರಣದಲ್ಲಿ  ಪ್ರಶಾಂತ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಸೆರೆಗೀಡಾದ ಈತನನ್ನು  ಬಂಧಿಸಿ ನ್ಯಾಯಾಂಗ  ಬಂಧನದಲ್ಲಿರಿ ಸಲಾಗಿತ್ತು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಈತ  ಅನಂತರ ಹಾಜರಾಗದೆ ಕರ್ನಾಟಕಕ್ಕೆ ಪರಾರಿ ಯಾಗಿದ್ದನು. ಇದರಿಂದ 2010ರಲ್ಲಿ ಈತನನ್ನು ನ್ಯಾಯಾಲಯ ತಲೆಮರೆಸಿ ಕೊಂಡ ಆರೋಪಿಯೆಂದು ಘೋಷಿ ಸಿತ್ತು.  ಈತ ನಿನ್ನೆ ತೊಕ್ಕೋಟ್‌ನ ಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಅಲ್ಲಿಗೆ ತೆರಳಿದ ಪೊಲೀಸರು ಅತೀ ಸಾಹಸದಿಂದ ಆರೋಪಿಯನ್ನು  ಬಂಧಿಸಿದ್ದಾರೆ.

You cannot copy contents of this page