ಬಸ್ ಕಂಡಕ್ಟರ್ ನಿಧನ

ನೀರ್ಚಾಲು: ಬೇಳ ಬಂಡ್ರಡ್ಕ ನಿವಾಸಿ ಬಿ.ಆರ್. ಮಾಧವ (72) ಎಂಬವರು ನಿಧನಹೊಂದಿದರು. ಕಾಞಂಗಾಡ್‌ನಲ್ಲಿರುವ ಮಗಳ ಮನೆಯಲ್ಲಿದ್ದ ಇವರಿಗೆ ಹೃದಯಾಘಾ ತವುಂಟಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಕುಂಬಳೆ-ಮುಳ್ಳೇರಿಯ ರೂಟ್‌ನಲ್ಲಿ ಸಂಚರಿಸುವ ಗುರುವಾ ಯೂರಪ್ಪನ್ (ಪ್ರಭು ಗಣೇಶ್) ಬಸ್‌ನಲ್ಲಿ ಹಲವು ವರ್ಷಗಳ ಕಾಲ ಇವರು ನಿರ್ವಾಹಕನಾಗಿ ಕೆಲಸ ನಿರ್ವಹಿಸಿದ್ದರು.

ಮೃತರು ಪತ್ನಿ ಕಮಲ, ಮಕ್ಕಳಾದ ಭಾರತಿ, ಚಿತ್ರಲೇಖ, ಶಾಂತಿ, ಅಳಿಯಂದಿರಾದ ಸತೀಶ್, ರಮೇಶ್, ಹರ್ಷ, ಸಹೋದರಿ ಬೇಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page