ಕಯ್ಯಾರ ಕಿಂಞಣ್ಣ ರೈ ಜನ್ಮ ದಿನಾಚರಣೆ, ಕಯ್ಯಾರ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ 21ರಂದು

ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಹ ಯೋಗದಲ್ಲಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈ ಜನ್ಮದಿನಾಚರಣೆ, ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜೂ.೨೧ರಂದು ಬೆಳಗ್ಗೆ ೯ರಿಂದ ಕಯ್ಯಾರು ಕಾಮಿಲ್ ಕೊಕ್ಕೆಚಾಲು ಶಾಲಾ ವಠಾರದಲ್ಲಿ ನಡೆಯಲಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಉದ್ಘಾಟಿಸುವರು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ಮಾಜಿ ಶಾಸಕ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ, ಬಸವರಾಜ್ ಎಸ್. ಹೊರಟ್ಟಿ ಮತ್ತು ಸಮುದಾಯ ನಾಯಕ ಡಾ. ಮೂಡಂಬೈಲು ರವಿ ಶೆಟ್ಟಿ ಅವರಿಗೆ ಕಯ್ಯಾರ ಪ್ರಶಸ್ತಿ ಶಾಸಕ ಎ. ಕೆ. ಎಂ.ಅಶ್ರಫ್ ಪ್ರದಾನ ಮಾಡುವರು.
ಶಿವಾನಂದ ಕೋಟ್ಯಾನ್ ಕಟಪಾಡಿ ಅವರ ‘ಪರಂಪರೆಯ ಪಯಣ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅಧ್ಯಕ್ಷ ಎಲ್.ಎನ್ ಮುಕುಂದರಾಜ್ ಬಿಡುಗಡೆಗೊಳಿಸುವರು. ಕವಿತಾ ಕುಟೀರ ಪೆರಡಾಲ ಕಾರ್ಯದರ್ಶಿ ಡಾ. ಪ್ರಸನ್ನ ರೈ ಕಲ್ಲಕಳಿಯ ಕಯ್ಯಾರರು ಬರೆದ ಗೀತೆಗಳನ್ನು ಹಾಡುವರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಕಯ್ಯಾರು ಕ್ರೈಸ್ತರಾಜ ಚರ್ಚ್ ಧರ್ಮಗುರು ರೇ. ಫಾ. ವಿಶಾಲ್ ಮೋನಿಶ್, ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನಿಸಾ ಸಲೀಂ, ಕಾಸರಗೋಡು ಜಿ.ಪಂ. ಸದಸ್ಯ ಸೋಮಶೇಖರ ಜೆ.ಎಸ್., ಮಂಜೇಶ್ವರ ಬ್ಲಾಕ್ ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಮೋಹನ್ ರೈ, ಸದಸ್ಯೆ ಚಂದ್ರಾವತಿ ಶೆಟ್ಟಿ, ಪೈವಳಿಕೆ ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀನಾ, ಝಡ್.ಎ.ಕಯ್ಯಾರ್, ಪೈವಳಿಕೆ ಪಂ. ಸದಸ್ಯೆ ಪ್ರಿನ್ಸಿ ಡಿ’ಸೋಜಾ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆ ತ್ತೋಡಿ ಮುಖ್ಯ ಅತಿಥಿಗಳಾಗಿರುವರು.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ, ಭಗತ್ ರಾಜ್ ನಿಜಾಮಕರ, ಡಾ.ಎಂ.ಎಸ್ ಮದಬಾವಿ, ಅಶೋಕ ಚಂದರಗಿ, ಡಾ.ಸಂಜೀವ ಕುಮಾರ ಅತಿವಾಳೆ, ಶಿವರೆಡ್ಡಿ ಖ್ಯಾಡೇದ್ ಅತಿವಾಳೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ, ರಾಧಾಕೃಷ್ಣ ಕೆ. ಉಳಿಯ ತ್ತಡ್ಕ, ಶ್ರೀಧರ ಹೊಳ್ಳ, ಮಂಜುನಾಥ ಆಳ್ವ ಮಡ್ವ, ಅರಿಬೈಲು ಗೋಪಾಲ ಶೆಟ್ಟಿ, ತೆಕ್ಕೆಕೆರೆ ಶಂಕರನಾರಾಯಣ ಭಟ್, ಶ್ರೀಧರ ಶೆಟ್ಟಿ ಮುಟ್ಟಂ, ಹಮೀದ್ ಚರೋಳಿ, ರಾಘವ ಚೇರಾಲ್, ಬೇಬಿ ಶೆಟ್ಟಿ, ಪ್ರಸಾದ್ ರೈ, ಮೊಯ್ದೀನ್ ಕುಂಞÂ ಮಾಸ್ಟರ್, ಬಿ.ಎ.ಖಾದರ್ ಹಾಜಿ ಬಗುಡೆಲ್, ಪ್ರವೀಣ್ ರೈ ಪೊನ್ನತೋಡು, ಹಮೀದ್ ಕೊಕ್ಕಚಾಲ್, ರವಿ ನಾಯ್ಕಾಪು, ಚನಿಯಪ್ಪ ನಾಯ್ಕ, ಅಖಿಲೇಶ್ ನಗುಮುಗಂ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಡಾ.ನಾಗೇಶ್ ಕೆ.ಎನ್. ಅವರಿಂದ ನಾಡಗೀತೆ ಮತ್ತು ಕನ್ನಡ ಗೀತೆಗಳ ಗಾಯನ, ಸಮೂಹ ಶಾಸ್ತ್ರೀಯ ಭರತನಾಟ್ಯ, ಸಮೂಹ ಶಾಸ್ತ್ರೀಯ ಕಥಕ್ ನೃತ್ಯ, ಚೆಂಡೆ ವಾದನ, ಸಮೂಹ ಜಾನಪದ ನೃತ್ಯ, ಸಮೂಹ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಲಿದೆ.

RELATED NEWS

You cannot copy contents of this page