ಕುರುಮುಜ್ಜಿಕಟ್ಟೆ ಭಜನಾಮಂದಿರದಲ್ಲಿ ಭಾಗವತ ಸಪ್ತಾಹಕ್ಕೆ ಚಾಲನೆ: ಅಗಲ್ಪಾಡಿಯಿಂದ ಹಸಿರುವಾಣಿ ಹೊರೆಕಾಣಿಕೆ

ಕುಂಬ್ಡಾಜೆ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ನಿನ್ನೆಯಿಂದ ಆರಂಭಗೊಂಡ ಶ್ರೀಮದ್ಭಾಗವತ ಸಪ್ತಾಹದಂಗವಾಗಿ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಿಂದ ಹಸಿರು ವಾಣಿ ಹೊರೆಕಾಣಿಕೆ ಸಮರ್ಪಿಸ ಲಾಯಿತು. ಶ್ರೀಮದ್ಭಾಗವತ ಸಪ್ತಾಹ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ದೀಪ ಬೆಳಗಿಸಿದರು. ಸಂಚಾಲಕ ಶ್ರೀಕೃಷ್ಣ ಭಟ್ ಬಳಕ, ಕೋಶಾ ಧಿಕಾರಿ ಕೃಷ್ಣ ಮಣಿಯಾಣಿ ಅಗಲ್ಪಾಡಿ, ಗೋಪಾಲಕೃಷ್ಣ ಭಜನಾಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಜಯನಗರ, ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಅಧ್ಯಕ್ಷ ಕೆ.ವಿ. ರಮೇಶ ಶರ್ಮ, ಭಜನಾ ಸಮಿತಿ ಅಧ್ಯಕ್ಷ ರಾಧಾ ಕೃಷ್ಣನ್ ನಾಯರ್, ಮಂದಿರದ ಗುರುಸ್ವಾಮಿ ನಾರಾಯಣ, ಸೇವಾ ಸಮಿತಿ ಗೌರವಾಧ್ಯಕ್ಷ ಪವಿತ್ರನ್ ಕುರುಮುಜ್ಜಿಕಟ್ಟೆ ಉಪಸ್ಥಿತರಿದ್ದರು. ಮಂದಿರದ ಪದಾಧಿಕಾರಿ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ರಮೇಶ್ ಕೃಷ್ಣ ಪದ್ಮಾರು ವಂದಿಸಿದರು.

RELATED NEWS

You cannot copy contents of this page