ಕಲ್ಲುಕಟ್ಟುವ ಮೇಸ್ತ್ರಿ ಹೃದಯಾಘಾತದಿಂದ ನಿಧನ

ಕುಂಬಳೆ:  ಕಲ್ಲು ಕಟ್ಟುವ ಮೇಸ್ತ್ರಿಯೊಬ್ಬರು ಹೃದಯಾಘಾ ತದಿಂದ ನಿಧನ ಹೊಂದಿದರು.

ಕುಂಬಳೆ ದರ್ಬಾರ್ ಕಟ್ಟೆಯ ಪ್ರಕಾಶ್ (38) ಮೃತ ವ್ಯಕ್ತಿ. ಇಂದು ಬೆಳಿಗ್ಗೆ ಎದ್ದು ಮನೆಯವರೊಂದಿಗೆ ಮಾತನಾಡಿದ ಬಳಿಕ  ಕೊಠಡಿಯಲ್ಲಿ ನಿದ್ರಿಸಿದ್ದರು. ಅಲ್ಪ ಹೊತ್ತಿನ ಬಳಿಕ ಮನೆಯವರು ನೋಡಿದಾಗ ಪ್ರಕಾಶ್ ಅರೆಪ್ರಜಾ ವಸ್ಥೆಯಲ್ಲಿ ಕಂಡುಬಂದಿದ್ದು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಹೃದ ಯಾಘಾತದಿಂದ ಸಾವು ಸಂಭವಿ ಸಿರುವುದಾಗಿ ತಪಾಸಣೆಯಲ್ಲಿ ತಿಳಿದುಬಂದಿದೆ

ಮೃತರು ಪತ್ನಿ ಭಾರತಿ, ಪುತ್ರ ಸನ್ವಿತ್, ಸಹೋದರರಾದ ಬಾಬು, ಸದಾನಂದ, ಸಹೋದರಿ ಸರೋಜಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

You cannot copy contents of this page