ಕಾಸರಗೋಡು: ಬಾವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಧ್ಯೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡ ಕಾರ್ಮಿಕ ಮೃತಪಟ್ಟರು. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಆನಪೆಟ್ಟಿ, ಕಾವಿಲ್ ಮನೆಯ ಚಂದ್ರನ್ ನಾಯರ್ರ ಪುತ್ರ ರಾಜನ್ (64) ಮೃತಪಟ್ಟವರು. ನಿನ್ನೆ ವಾಯುನ್ನೋರಡಿ ಮೇನಿಕೋಟ್ನಲ್ಲಿ ದುರಂತ ಸಂಭವಿಸಿದೆ. ಕೆಲಸದ ಮಧ್ಯೆ ಬಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ಇವರನ್ನು ನೋರ್ತ್ ಕೋಟಚ್ಚೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಸಿದ್ಧತೆ ಮಧ್ಯೆ ಸಾವು ಸಂಭವಿಸಿದೆ. ಹೃದಯಾಘಾತ ಮರಣಕ್ಕೆ ಕಾರಣವೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಈ ವಿಷಯದಲ್ಲಿ ಸ್ಪಷ್ಟತೆ ಉಂಟಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸದುರ್ಗ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಮೃತರು ಪತ್ನಿ ಇಂದಿರಾ, ಮಕ್ಕಳಾದ ಐಶ್ವರ್ಯ, ವಿನಯರಾಜ್, ಅಳಿಯ ನಿತಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







