ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀಮದ್ ಭಾಗವತ ಸಪ್ತಾಹ ಆರಂಭ

ಕುಂಬ್ಡಾಜೆ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಜರಗುತ್ತಿರುವ ಶ್ರೀಮದ್ ಭಾಗವತ ಸಪ್ತಾಹದ ಅಂಗವಾಗಿ ದ್ವಿತೀಯ ದಿನ ಯಜ್ಞಾಚಾರ್ಯ ಬ್ರಹ್ಮಶ್ರೀ ಶಂಕರನ್ ನಂಬೂದಿರಿ ಚೇದಮಂಗಲA ಪಯ್ಯ ನ್ನೂರು ಪ್ರವಚನ ನಡೆಸಿಕೊಟ್ಟರು. ಮನಸ್ಸು ವ್ಯಾಕುಲತೆಯಲ್ಲಿರುವಾಗ ಯಾವುದೇ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಅವರು ತಿಳಿಸಿದರು. ಕಪಿಲಾವತಾರ, ನರನಾರಾಯಣ ಅವತಾರ, ದಕ್ಷಯಾಗ, ಧ್ರುವಚರಿತೆ, ಪುರಂಜನೋಪಖ್ಯಾನ, ಋಷಭಾವತಾರ, ಭಾರತ ಕಥೆ, ಭದ್ರಕಾಳಿ ಆವಿರ್ಭಾವ ಕಥಾಭಾಗವನ್ನು ಆಯ್ದುಕೊಂಡು ಪಾರಾಯಣ ಪ್ರವಚನ ನಡೆಯಿತು. ಪ್ರಾತಃಕಾಲ ಗಣಪತಿ ಹೋಮ ನಡೆಯಿತು. ಗೋಸಾಡ ಮಹಿಷಮರ್ದಿನಿ ಮಾತೃಸಮಿತಿಯ ಅಧ್ಯಕ್ಷೆ ಲಲಿತಾ ಗೋಸಾಡÀರಿಂದ ದೀಪಪ್ರಜ್ವಲನೆಯೊಂ ದಿಗೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.

RELATED NEWS

You cannot copy contents of this page