ಕುಂಬಳೆ: ಮುಂಜಾನೆ ವೇಳೆ ನಮಾಜು ನಡೆಸಿ ಕುಳಿತಿದ್ದ ಹಿರಿಯ ಸೀಮೆನ್ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಬಂದ್ಯೋಡು ಪಾಚಾಣಿ ಪಾಚಿವಳಪ್ಪ್ ನಿವಾಸಿ ಮೊಯ್ದೀನ್ ಕುಟ್ಟಿ (32) ಮೃತಪಟ್ಟ ವ್ಯಕ್ತಿ. ಮೃತರು ಪತ್ನಿ ನಫೀಸ, ಮಕ್ಕಳಾದ ಆಮಿನ, ಸುಹರಾ, ಸುಬೈದ, ಲತೀಫ್, ಅಬ್ದುಲ್ ರಹ್ಮಾನ್, ಅಶ್ರಫ್, ಮುತ್ತಲೀಬ್, ಅಳಿಯ-ಸೊಸೆಯಂದಿರಾದ ಸತ್ತಾರ್, ಇಬ್ರಾಹಿಂ, ಅಸೀಸ್, ನಿಸ, ಹುಸೈಬ, ಆಶಿಫ, ಅನೀಸ, ಸಹೋದರ-ಸಹೋದರಿಯರಾದ ಮೊಹಮ್ಮದ್ ಅಲಿ, ಖದೀಜ, ಆಯಿಶಾಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






