ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟ :ರಾಜ್ಯಾದ್ಯಂತ ದಾಳಿ: 600ಕ್ಕೂ ಹೆಚ್ಚು ಸಿಲಿಂಡರ್ ಪತ್ತೆ

ಕಾಸರಗೋಡು: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ವಾತಾ ವರಣ ಇನ್ನೂ ಮುಂದುವರಿಯುತ್ತಿರುವ ವೇಳೆಯಲ್ಲೇ ಅದರ ಮರೆಯಲ್ಲಿ ಕೇರಳದಾದ್ಯಂತ ಕಾಳಸಂತೆಯಲ್ಲಿ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್  ಮಾರಾಟ,  ಅವುಗಳ ಅಕ್ರಮ ದಾಸ್ತಾನು ಮಾತ್ರವಲ್ಲದೆ ಗೃಹ ಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗಳ ಅವ್ಯವಹಾರ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳು  ನಡೆಯು ತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇದರಿಂದ ಇಂತಹ ಅಕ್ರಮ ಚಟು ವಟಿಕೆಗಳನ್ನು ತಡೆಗಟ್ಟಲು ರಾಜ್ಯದಲ್ಲಿ ಎನ್‌ಫೋರ್ಸ್ ಮೆಂಟ್ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಅಲ್ಲದೆ ಸಾರ್ವಜನಿಕ ವಿತರಣಾ ಇಲಾಖೆ ಇನ್ನೊಂದೆಡೆ ಪೊಲೀಸರ ಸಹಾಯ ದೊಂದಿಗೆ ರಾಜ್ಯಾದ್ಯಂತ  ವ್ಯಾಪಕ ದಾಳಿ ಮತ್ತು ತಪಾಸಣೆ ಆರಂಭಿಸಿದೆ.

ರಾಜ್ಯದ ಹೆಚ್ಚಿನ ಎಲ್ಲಾ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ತಿರುವನಂತಪುರ, ಕೊಲ್ಲಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಇಂತಹ ಭಾರೀ ಅವ್ಯವಹಾರಗಳು ನಡೆಯುತ್ತಿ ರುವ ಬಗ್ಗೆ ಸರಕಾರಕ್ಕೆ ಗುಪ್ತ ಮಾಹಿತಿ ಲಭಿಸಿದ್ದು, ಅದರ ಜಾಡು ಹಿಡಿದು ಸ್ಪೆಶಲ್ ಎನ್‌ಫೋರ್ಸ್ ಮೆಂಟ್  ಸ್ಕ್ವಾಡ್ ಮತ್ತು ಸಾರ್ವಜನಿಕ ಸರಬರಾಜು ಇಲಾಖೆ ರಾಜ್ಯಾದ್ಯಂತ ವಾಗಿ ಈ  ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇದರಲ್ಲಿ ಸಾರ್ವಜನಿಕ ತೈಲ ಸಂಸ್ಥೆಗಳಿಗೆ ಸೇರಿದ  ಗೃಹ ಬಳಕೆ, ವಾಣಿಜ್ಯ ಮತ್ತು ಕಿರು ಎಲ್‌ಪಿಜಿ ಸಿಲಿಂಡರ್‌ಗಳೂ ಸೇರಿದಂತೆ ಈತನಕ ಸುಮಾರು 600ಕ್ಕೂ ಹೆಚ್ಚು ಎಲ್‌ಪಿಜಿ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ವಶಪಡಿ ಸಿಕೊಳ್ಳಲಾಗಿದೆ.  ಇದರ ಹೊರತಾಗಿ ಎಲ್‌ಪಿಜಿ ಸಿಲಿಂಡರ್ ಗಳನ್ನು ಹೇರಿ ಕೊಂಡು ಸಾಗುತ್ತಿರುವ ವಾಹನಗಳನ್ನೂ ಈ ತಂಡ ಪರಿಶೀಲಿಸುತ್ತಿದೆ.ಇಂತಹ ಪರಿಶೀಲನೆಯಲ್ಲಿ ಸರಿಯಾದ ದಾಖಲು ಪತ್ರಗಳಿಲ್ಲದೆ ವಾಹನವೊಂದರಲ್ಲಿ ಸಾಗಿಸುತ್ತಿದ್ದ ೫೦ರಷ್ಟು  ಎಲ್‌ಪಿಜಿ ಸಿಲಿಂಡರ್‌ಗಳನ್ನು ನಾಗರಿಕ ಸರಬರಾಜು ಇಲಾಖೆ  ತಂಡ ವಶಕ್ಕೆ ತೆಗೆದುಕೊಂಡಿದೆ. ಮಾತ್ರವಲ್ಲ ಈ ರೀತಿ ಅಕ್ರಮ ಎಲ್‌ಪಿಜಿ ಸಿಲಿಂಡರ್ ಸಾಗಿಸುವ, ಬಚ್ಚಿಡುವ, ಮಾರಾಟ ಮಾಡುವವರ ವಿರುದ್ಧ ೧೯೫೫ರ ಅವಶ್ಯಕ ಸಾಮಗ್ರಿ ಕಾನೂನು ಪ್ರಕಾರ  ಅಗತ್ಯದ ಕಾನೂನುಕ್ರಮಗಳಿಗೂ ಚಾಲನೆ ನೀಡಲಾಗಿದೆ. ಹೀಗೆ ವಶಪಡಿಸಲಾದ  ಸಾಮಗ್ರಿಗಳನ್ನು  ಮುಂದಿನ ಹಂತದ ತನಿಖೆಗಾಗಿ ಬಿಗಿ ಭದ್ರತೆಯಲ್ಲಿರಿಸಲಾಗಿದೆಯೆಂದು ಕೇರಳ ಎಲ್‌ಪಿಜಿ ವಾರ್‌ರೂಂನ ಹೊಣೆಗಾರಿಕೆ ಹೊಂದಿರುವ ಸ್ಪೆಷಲ್ ಆಫೀಸರ್ ಮೊಹಮ್ಮದ್ ಶಫೀಕ್ ತಿಳಿಸಿದ್ದಾರೆ. ಮಾತ್ರವಲ್ಲ ಇಂತಹ ದಾಳಿ ಇನ್ನೂ ಮುಂದುವರಿ ಯಲಿದೆಯೆಂದು ಅವರು ಹೇಳಿದ್ದಾರೆ.

RELATED NEWS

You cannot copy contents of this page