ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ನಗ್ನ ಫೋಟೋ ತೆಗೆದು ಬೆದರಿಸಿ ಹಣ ಪಡೆಯಲೆತ್ನ:ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ಕೂಡ್ಲು ನಿವಾಸಿಯೋರ್ವನನ್ನು ಕಾರಿನಲ್ಲಿ ಅಪಹರಿಸಿಅವರ ನಗ್ನ ಫೋಟೋ ತೆಗೆದು ಹಣ ನೀಡುವಂತೆ ಬೆದರಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿ ಸಲಾಗಿದೆ. ಇದರಂತೆ ಕಾಸರಗೋಡು ಪೊಲೀಸರು ನಾಲ್ವರ ವಿರುದ್ಧ  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂಡ್ಲು ಬಳ್ಳಿಮೊಗರು ಹೌಸ್‌ನ ಸುರೇಶ್ ನಾಯ್ಕ (57) ಎಂಬವರು ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 31ರಂದು ರಾತ್ರಿ ಕೂಡ್ಲು ಎರಿಯಾಲ್ ರಸ್ತೆ ಬಳಿಯಿಂದ ಕಂಡರೆ ಗುರುತುಹಚ್ಚಲು ಸಾಧ್ಯವಾಗುವ ಇಬ್ಬರೂ ಸೇರಿದಂತೆ ನಾಲ್ವರ ತಂಡ ತನ್ನನ್ನು ಕಾರಿನಲ್ಲಿ ಅಪಹರಿಸಿ ಕಾಸರಗೋಡು ವೆಂಕಟ್ರಮಣ ದೇವಸ್ಥಾನ ಪರಿಸರದ ನಿರ್ಜನ ಪ್ರದೇಶಕ್ಕೆ ಸಾಗಿಸಿ ಅಲ್ಲಿ  ಕತ್ತರಿಕೋಡಿ ಕೊಠಡಿಯೊಂದರಲ್ಲಿ  ಮೊಬೈಲ್‌ನಲ್ಲಿ ನಗ್ನ ಫೋಟೋಗಳನ್ನು ತೆಗೆದು ಆ ದೃಶ್ಯಗಳನ್ನು ನನ್ನ ಸಂಬಂಧಿಕರಿಗೆ ಕಳುಹಿಸಿಕೊಡುವು ದಾಗಿ ಬೆದರಿಸಿ ಹಣ ಎಗರಿಸಲೆತ್ನಿಸಿ ದರೆಂದೂ ಆ ವೇಳೆ ಓರ್ವ ನನ್ನ ಮುಖಕ್ಕೆ ಹೊಡೆದನೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಸುರೇಶ್ ನಾಯ್ಕ ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page