ಬದಿಯಡ್ಕ: ಒಂಭತ್ತು ವರ್ಷಗಳಿಂದ ಬದಿಯಡ್ಕ ಬಳಿಯ ಕಾಡಮನೆ ಪ್ರಶಾಂತ್ ಭವನ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಮೃತಪಟ್ಟರು. ತಲಶ್ಶೇರಿ ಚಾಂಬಾಡ್ ವಲಿಯ ಪರಂ ಬತ್ತು ನಿವಾಸಿ ವಿ.ಪಿ. ಅಬ್ದುಲ್ ಅಸೀಸ್ (59) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಇತ್ತೀಚೆಗೆ ಅಸೌಖ್ಯ ಬಾಧಿಸಿದ್ದ ಇವರನ್ನು ಕುಂ ಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಸಫಿಯ, ಇಬ್ಬರು ಮಕ್ಕಳು, ಸಹೋದರಿ ಸಹಿತ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಂಬಂಧಿಕರು ಆಗಮಿಸಿ ಮೃತದೇಹವನ್ನು ಊರಿಗೆ ಕೊಂಡೊಯ್ಯುತ್ತಿದ್ದಾರೆ.






