ಟ್ರಾಫಿಕ್ ರೆಗ್ಯುಲೇಟರಿ ಸಮಿತಿ ತೀರ್ಮಾನ ಕುಂಬಳೆಯಲ್ಲಿ ಜ್ಯಾರಿಯಾಗಲಿಲ್ಲ: ಮರ್ಚೆಂಟ್ಸ್ ಯೂತ್ ವಿಂಗ್ ಪ್ರತಿಭಟನೆಗೆ

ಕುಂಬಳೆ: ಟ್ರಾಫಿಕ್ ರೆಗ್ಯುಲೇಟರಿ ಸಮಿತಿಯ ತೀರ್ಮಾನಗಳು ಕುಂಬಳೆ ಯಲ್ಲಿ ಜ್ಯಾರಿಯಾಗದಿರುವುದಕ್ಕೆ ಮರ್ಚೆಂಟ್ ಯೂತ್ ವಿಂಗ್ ಪ್ರತಿಭಟಿಸಿದೆ. ಬಸ್ ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ಸಂಕಷ್ಟ ತರುವ ಪರಿಷ್ಕಾರವನ್ನು ಪುನರ್ ಪರಿಶೀಲಿ ಸಬೇಕೆಂಬ ಕುಂಬಳೆ ಪಂಚಾಯತ್ ಆಡಳಿತ ಸಮಿತಿ ತೀರ್ಮಾನ ಕೂಡಾ ಜ್ಯಾರಿಯಾಗದಿ ರುವುದರಲ್ಲಿ ಸಭೆ ರೋಷಗೊಂಡಿದೆ. ಪೇರಾಲ್ ಕಣ್ಣೂರು, ಸೀತಾಂಗೋಳಿ, ಪೆರ್ಲ, ಸುಳ್ಯ, ಬದಿಯಡ್ಕ, ಮುಳ್ಳೇರಿಯ ಭಾಗಗಳಿಗೆ ತೆರಳುವ ಬಸ್‌ಗಳು ಪ್ರಯಾಣಿಕರ ಸೌಕರ್ಯಾರ್ಥ ಕುಂಬಳೆಯ ಮುರಿದು ತೆಗೆದ ಹಳೆಯ ಬಸ್ ನಿಲ್ದಾಣದಲ್ಲಿ ೫ ನಿಮಿಷ ನಿಲುಗಡೆ ಮಾಡಬೇಕೆಂದು ಪಂಚಾಯತ್ ಆಡಳಿತ ಸಮಿತಿ ಬಸ್ ನೌಕರರಲ್ಲಿ ಲಿಖಿತವಾಗಿ ಆಗ್ರಹಿಸಿತ್ತು. ಬಸ್ ಆನರ್ಸ್ ಅಸೋಸಿಯೇಶನ್ ನಲ್ಲೂ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯಲ್ಲೂ ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳಿದೆ ಎಂದು, ಇದು ತೀರ್ಮಾನ ಕೈಗೊಳ್ಳಲು ವಿಳಂಬಕ್ಕೆ ಕಾರಣವೆನ್ನಲಾಗುತ್ತಿದೆ.

ಇತ್ತೀಚೆಗೆ ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ ಹಳೆಯ ಬಸ್ ನಿಲ್ದಾಣಕ್ಕೆ ತಲುಪಿ ಈ ಬಗ್ಗೆ ಬಸ್ ಮಾಲಕರಿಗೆ ಕಠಿಣ ನಿರ್ದೇಶ ನೀಡಿದ್ದರು. ಅಧ್ಯಕ್ಷರ ಜೊತೆ ಬದಿಯಡ್ಕ ಬಸ್ ಕಾರ್ಮಿಕರ ಯೂನಿಯನ್ ಅಧ್ಯಕ್ಷ ಹಾರಿಸ್ ಬದಿ ಯಡ್ಕ ಕೂಡಾ ಇದ್ದರು. ಈ ನಿಲುವು ವಿರುದ್ಧ ಮರ್ಚೆಂಟ್ ಯೂತ್ ವಿಂಗ್ ಪೊಲೀಸ್ ಸ್ಟೇಷನ್ ಮಾರ್ಚ್ ಸಹಿತ ಪ್ರತಿಭಟನೆ ನಡೆಸಲು ಮುಂದಾಗುತ್ತಿದೆ.

RELATED NEWS

You cannot copy contents of this page