ಜೋಡುಕಲ್ಲು ರಸ್ತೆ ಬದಿ ಒಣಗಿದ ಮರದಿಂದ ಅಪಾಯ ಭೀತಿ: ತೆರವಿಗೆ ಆಗ್ರಹ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಜೋಡುಕಲ್ಲು ಎಂಬಲ್ಲಿ ಒಣಗಿದ ಮರಗಳು ಯಾವುದೇ ಕ್ಷಣ ಧರಾಶಾಯಿಯಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಈ ರಸ್ತೆ ಅಭಿವೃದ್ದಿಗೊಳಿಸುವ ವೇಳೆ ಗುತ್ತಿಗೆದಾರ ಅಪಾಯದ ಸ್ಥಿತಿಯ ಲ್ಲಿರುವ ಮರಗಳನ್ನು ತೆರೆವುಗೊಳಿಸಿ ದ್ದರು. ಅದರೆ ಒಣಗಿದ ಈ ಮರವನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಅಪಾಯ ಸಾz್ಯÀsತೆಯಿದೆ. ಈ ಪರಿಸರ ದಲ್ಲಿ ಪ್ರಮುಖ ವಿದ್ಯುತ್ ತಂತಿಹೊA ದಿರುವ ಕಂಬಗಳಿದ್ದು, ಮರ ಮುರಿದು ತಂತಿ ಮೇಲೆ ಬಿದ್ದಲ್ಲಿ ಹಲವಾರು ಕಂಬಗಳು ರಸ್ತೆಗೆ ಮುರಿದು ಬೀಳಬಹುದಾಗಿದೆ. ದಿನನಿತ್ಯ ನೂರಾ ರು ವಾಹನಗಳು ಸಂಚರಿಸುತ್ತಿದೆ. ಅಲ್ಲದೆ ಈ ಪರಿಸರ ವ್ಯಾಪಾರ ಸಂಸ್ಥೆಗಳು, ಜನನಿಬಿಡ ಪ್ರದೇಶವಾಗಿದೆ. ಒಣಗಿದ ಮರ ಗಳನ್ನು ತೆರವುಗೊ ಳಿಸಲು ಊರವರು ಒತ್ತಾಯಿಸುತ್ತಲೇ ಇದ್ದರೂ ತೆರವಿಗೆ ಕ್ರಮವಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಮಳೆಗಾಲ ಸಮೀಪಿಸುತ್ತಿದ್ದು, ಮರವನ್ನು ತೆರವು ಗೊಳಿಸದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ.

You cannot copy contents of this page