ಉಪ್ಪಳ: ಹಲ್ಲಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಮಹಿಳೆಗೆ ಹೃದಯಾಘಾತ ಉಂಟಾಗಿ ನಿಧನ ಹೊಂದಿದ ಘಟನೆ ನಡೆದಿದೆ. ಉಪ್ಪಳ ಸಮೀಪದ ಕೋಡಿಬೈಲು ನಿಡುಮದಿ ನಿವಾಸಿ ದಿ| ಬೋಜರ ಪತ್ನಿ ಸಾವಿತ್ರಿ (55) ನಿಧನ ಹೊಂದಿದವರು. ನಿನ್ನೆ ಸಂಜೆ ಇವರು ಉಪ್ಪಳದ ಖಾಸಗಿ ಆಸ್ಪತ್ರೆಗೆ ಹಲ್ಲಿನ ಚಿಕಿತ್ಸೆಗೆಂದು ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಉಂಟಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ನಿಧನ ಹೊಂದಿದ್ದಾರೆ. ಮೃತರು ತಾಯಿ ಸುಶೀಲ, ಮಕ್ಕಳಾದ ರೂಪೇಶ್, ರೂಪಿಕ, ಅಳಿಯ ರಂಜಿತ್, ಸಹೋದರಿಯರಾದ ಚಂದ್ರಾ ವತಿ, ಶೀಲಾವತಿ, ಸುರೇಖ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ರಾಘವ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರ ಅಂತ್ಯಸAಸ್ಕಾರ ನಿನ್ನೆ ರಾತ್ರಿ ಚೆರುಗೋಳಿ ರುದ್ರಭೂಮಿಯಲ್ಲಿ ನಡೆಯಿತು.






