ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಬೇಕೂರು ಪರಿಸರಗಳಲ್ಲಿ ವಿದ್ಯುತ್ ವೋಲ್ಟೇಜ್ ಕ್ಷಾಮ ತೀವ್ರಗೊಂಡಿದೆಯೆಂದು ದೂರಲಾಗಿದೆ. ನೂರಾರು ಮನೆಗಳಿ ರುವ ಈ ಪ್ರದೇಶದಲ್ಲಿ ವೋಲ್ಟೇಜ್ ಕ್ಷಾಮದಿಂದಾಗಿ ರಾತ್ರಿ ಕಾಲಗಳಲ್ಲಿ ವಿದ್ಯಾರ್ಥಿಗಳಿಗೆ ಓದಲು, ಮನೆ ಮಂದಿಗೆ ಗೃಹೋಪಕರಣಗಳನ್ನು ಉಪಯೋಗಿಸಲು, ವ್ಯಾಪಾರಿ ಸಂಸ್ಥೆಗಳು, ಉದ್ದಿಮೆಗಳು ಕಾರ್ಯಾ ಚರಿಸಲು ಸಾಧ್ಯವಾಗುತ್ತಿಲ್ಲವೆನ್ನಲಾಗಿದೆ. ಬಿಸಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಫ್ಯಾನ್, ಎಸಿಯನ್ನು ಉಪ ಯೋಗಿಸಲು ಸಾದ್ಯವಾಗದ ಸ್ಥಿತಿಯೂ ಇದೆಯೆನ್ನಲಾಗಿದೆ. ಇದರಿಂದಾಗಿ ಸ್ಥಳೀಯರು ಸಂಕಷ್ಟದಲ್ಲಿದ್ದಾರೆ. ಈ ಪರಿಸರದಲ್ಲಿ ಸಂಪರ್ಕ ಹೆಚ್ಚಾಗಿ ಟ್ರಾನ್ಸ್‌ಫಾರ್ಮ್‌ಗೆ ಲೋಡ್ ಹೆಚ್ಚಾಗಿರುವುದೇ ವೋಲ್ಟೇಜ್ ಕ್ಷಾಮಕ್ಕೆ ಕಾರಣವೆನ್ನಲಾಗಿದೆ. ಈ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕೆಂದು ಎನ್‌ಸಿಪಿ ಮಂಜೇಶ್ವರ ಬ್ಲೋಕ್ ಅಧ್ಯಕ್ಷ ಮಹಮೂದ್ ಕೈಕಂಬ ವಿದ್ಯುತ್ ಇಲಾಖೆ ಸಚಿವರಿಗೆ ಕಳುಹಿಸಿದ ಇ-ಮೈಲ್ ಮನವಿಯಲ್ಲಿ ಆಗ್ರಹಿಸಿದ್ದಾರೆ.







