ತನ್ನನ್ನು ಹಾಗೂ ಪಕ್ಷವನ್ನು ಅವಮಾನಿಸಲು ಗೂಢ ತಂತ್ರ- ಎಂ.ಎಲ್. ಅಶ್ವಿನಿ

ಕಾಸರಗೋಡು: ಸುಳ್ಳು ವರದಿ ಪ್ರಕಟಿಸಿ ತನ್ನನ್ನು ಹಾಗೂ ಪಕ್ಷದ ಜಿಲ್ಲಾ ನಾಯಕತ್ವವನ್ನು ಅವಮಾನಿ ಸಲು ಗೂಢ ಪ್ರಯತ್ನ ನಡೆಯುತ್ತಿ ದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ. ನಡೆಯದ ಮಂಡಲ ಅವಲೋಕನ ಸಭೆಯಲ್ಲಿ  ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಹಾಗೂ ತನ್ನ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿವೆ.  ಮತ ಸೇರಿಸಲು ಸೂಕ್ತ ಚಟುವಟಿಕೆ ನಡೆಸಿಲ್ಲವೆಂದೂ ಮಗನ ಮತ ಕೂಡಾ ಸೇರಿಸಿಲ್ಲವೆಂಬ ಆರೋಪ ಸತ್ಯಕ್ಕೆ ದೂರವಾದುದಾಗಿದೆ. ಮತ ಸೇರಿಸಲು ಬೇಕಾದ ಎಲ್ಲಾ ಸಹಾಯಗಳನ್ನು ಜಿಲ್ಲಾ ಸಮಿತಿ ಎಲ್ಲಾ ಮಂಡಲ ಸಮಿತಿಗಳಿಗೂ ಒದಗಿಸಿದ. ಎರಡು ತಿಂUಳ ಹಿಂದೆ ಮಂಜೇಶ್ವರ ಮಂಡಲದ ಹೊಣೆಗಾರಿಕೆಯಿಂದ ದೂರ ಸರಿದಿದ್ದಾರೆ ಎಂಬ ಸುಳ್ಳು ವರದಿ ಪ್ರಕಟಿಸಿದ ಮಾಧ್ಯಮಗಳೇ ಇದೀಗಲೂ ಸುಳ್ಳು ವರದಿ ಹರಡುತ್ತಿರುವುದಾಗಿ ಅಶ್ವಿನಿ ತಿಳಿಸಿದ್ದಾರೆ.

ಓರ್ವೆ ಮಹಿಳೆ ಎನ್‌ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದುದು, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದುದು, ಸ್ಥಳೀಯಾಡಳಿತ ಚುನಾವಣೆಯಲ್ಲಿ ಐದು  ಪಂಚಾಂiiತ್‌ಗಳಲ್ಲಿ ಅಧಿಕಾರಕ್ಕೇರಿ ಬಿಜೆಪಿ ಸಾಧನೆಗೈದಿರುವುದು ಮಾಧ್ಯಮ ಕಾರ್ಯಕರ್ತರ ವೇಷ ಧರಿಸಿದ ರಾಜಕೀಯ ವ್ಯಕ್ತಿಗಳಿಗೆ ಸಹಿಸಲಾಗುವುದಿಲ್ಲ. ಸುಳ್ಳು ವರದಿ ಪ್ರಕಟಿಸಿ ತನ್ನನ್ನು ಹಾಗೂ ಪಕ್ಷವನ್ನು ಅಮಾನಿಸಲು ಕೆಲವು ಮಾಧ್ಯಮಗಳು ಹಾಗೂ ಮಾಧ್ಯಮ ಕಾರ್ಯಕರ್ತರು ದೀರ್ಘಕಾಲದಿಂದ ಪ್ರಯತ್ನಿಸುತ್ತಿದ್ದಾರೆ. ಇದರ ವಿರುದ್ಧ ವಾರ್ತಾ ಪ್ರಸಾರ ಸಚಿವಾಲಯ ಹಾಗೂ ನ್ಯೂಸ್ ಬ್ರೋಡ್ ಕಾಸ್ಟರ್ಸ್ ಆಂಡ್ ಡಿಜಿಟಲ್ ಅಸೋಸಿಯೇಶನ್‌ಗೆ ದೂರು ನೀಡುವುದಾಗಿಯೂ, ಮಾನನಷ್ಟ ಸಹಿತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.

You cannot copy contents of this page