ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕ್ರಮವಿಲ್ಲ: ಮುಸ್ಲಿಂ ಲೀಗ್‌ನಿಂದ ಧರಣಿ

ಉಪ್ಪಳ: ಪತ್ವಾಡಿ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ದುರಸ್ತಿ ನಡೆಸಲು  ಜಲಪ್ರಾಧಿಕಾರಕ್ಕೆ ಅನುಮತಿ ನೀಡದಿರುವುದನ್ನು ಪ್ರತಿಭಟಿಸಿ ಮಂಜೇಶ್ವರ ಪಿಡಬ್ಲ್ಯುಡಿ ರೋಡ್ಸ್ ಅಸಿಸ್ಟೆಂಟ್ ಇಂಜಿನಿಯರ್‌ರ ಕಚೇರಿಯ ಮುಂಭಾಗ ಮಂಗಲ್ಪಾಡಿ ಪಂಚಾಯತ್ ಮುಸ್ಲಿಂ ಲೀಗ್ ವಾರ್ಡ್ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು. 3,4ನೇ ವಾರ್ಡ್ ಸಮಿತಿ ಪದಾಧಿಕಾರಿಗಳು ಎಂ.ಕೆ. ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಧರಣಿಯನ್ನು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ರಹಿಮಾನ್ ಉದ್ಘಾಟಿಸಿದರು.

ಕುಂಬಳೆ ಜಲ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್‌ರ ಆದೇಶ ಪತ್ರಕ್ಕೆ ಅನುಮತಿ  ನೀಡದೆ ಮಂಜೇಶ್ವರ ಪಿಡಬ್ಲ್ಯುಡಿ ಅಸಿಸ್ಟೆಂಟ್ ಇಂಜಿನಿಯರ್ ವಿಳಂಬ ನೀತಿ ಅನುಸರಿಸಿದ್ದಾರೆ. ತುರ್ತಾಗಿ ಪರಿಹಾರ ಕಾಣಬೇಕಾದ ಕುಡಿಯುವ ನೀರು ಸಮಸ್ಯೆಗೆ ಅನಾವಶ್ಯಕವಾಗಿ ವಿಳಂಬಗೊಳಿಸಿ ರುವುದಾಗಿ ಆರೋಪಿಸಿ ಧರಣಿ ನಡೆಸಲಾಗಿದೆ. ಪಂಚಾಯತ್ ಸದಸ್ಯೆ ನಾಸಿಯ, ಮುಖಂಡರಾದ ಟಿ.ಎ. ಶರೀಫ್, ಜಬ್ಬಾರ್ ಪತ್ವಾಡಿ, ಮಳಿ ಅಬೂಬಕ್ಕರ್, ನೌಶಾದ್ ಎಸ್.ಎ, ಆರಿಫ್, ರಹ್ಮಾನ್ ಮಾಕಾಳಿ ಮಾತನಾಡಿದರು.

You cannot copy contents of this page