ಉಪ್ಪಳ: ಕುಡಿಯುವ ನೀರಿನ ಕ್ಷಾಮ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಪಂಚಾಯತ್ನಿಂದ ಎಲ್ಲಾ ವಾರ್ಡ್ಗಳಿಗೆ ಕುಡಿಯುವ ನೀರು ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರಥಮ ಹಂತದ ಕುಡಿಯುವ ನೀರು ವಿತರಣೆಯನ್ನು ನಿನ್ನೆ ಆರಂಭಿಸಲಾಯಿತು. ಪಂಚಾಯತ್ ಕಚೇರಿ ಆವರಣದಲ್ಲಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿ ಮಾತನಾಡಿದರು. ಕುಡಿಯುವ ನೀರಿನ ಕ್ಷಾಮವಿರುವ ಪ್ರದೇಶದಲ್ಲಿ ವಾರ್ಡ್ನ ಜನಪ್ರತಿನಿಧಿಯವರನ್ನು ಸಂಪರ್ಕಿಸಬೇಕಾಗಿದೆ. ದಿನದಲ್ಲಿ ಎಂಟು ವಾರ್ಡ್ಗಳಿಗೆ ನೀರು ವಿತರಿಸಲಾಗುವುದು. ಇದೇ ರೀತಿ ಮೂರು ದಿನಗಳಲ್ಲಿ ಒಟ್ಟು 24 ವಾರ್ಡ್ಗಳಿಗೆ ಪ್ರಥಮ ಹಂತದ ನೀರನ್ನು ವಿತರಿಸಲಾಗುವುದು. ಬೆಳಿಗ್ಗೆ 7ರಿಂದ ಸಂಜೆ 7ರ ತನಕ ನೀರು ವಿತರಣೆ ನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.






