ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ಸಂಪನ್ನ

ಕಾಸರಗೋಡು: ಭಾರತೀಯ ಸಂಸ್ಕೃತಿ ಜಗತ್ತಿಗೆ ನೀಡಿದ ದೊಡ್ಡ ಸಂದೇಶ ಧರ್ಮವಾಗಿದೆ. ಸಮಸ್ತ ವೇದ ಸಾರ ಸಂಗ್ರಹವಾದ ಭಗವದ್ಗೀತೆ ಧರ್ಮದಿಂದ ಆರಂಭಗೊAಡು ‘ಮಮ’ ಎಂಬ ತನ್ನ ಧರ್ಮದ ಬಗ್ಗೆ ಸಾರಿದೆ. ಇದರಿಂದಲೇ ಧರ್ಮವೇ ಪ್ರಧಾನವಾದುದು, ಶ್ರೇಯಸ್ಸೂ, ಪ್ರೇಯಸ್ಸೂ ನೀಡುವುದೇ ಆ ಧರ್ಮವಾಗಿದೆ ಎಂದು ಕಾಸರಗೋಡು ಮಾತಾ ಅಮೃತಾನಂದಮಯೀ ಮಠದ ಬ್ರಹ್ಮಚಾರಿ ಶ್ರೀ ವೇದ ವೇದಾಮೃತ ಚೈತನ್ಯ ಆಶೀರ್ವಚನದಲ್ಲಿ ತಿಳಿಸಿದರು.
ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋ ತ್ಸವದ ಅಂಗವಾಗಿ ನಿನ್ನೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಈಶ್ವರ ಮನುಷ್ಯ ರೂಪದಲ್ಲಿ ಜನಿಸಿದ ಧರ್ಮಮೂರ್ತಿಗಳ ನೆಲ ಭರತಭೂಮಿಯಾಗಿದೆ. ಇಲ್ಲಿ ಜನಿಸಿರುವ ಹಿರಿಮೆಯನ್ನು ಅರಿತು ಬದುಕನ್ನು ಸತ್ಕರ್ಮಗಳ ಮೂಲಕ ಕೃತಾರ್ಥಗೊಳಿಸಬೇಕು. ಹೊಸ ತಲೆಮಾರು ಗಂಭೀರ ಲೋಪಗಳ ಹಾದಿಯಲ್ಲಿ ಮುಂದುವರಿಯುತ್ತಿರು ವುದು ಕಳವಳ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ನೆಲೆಗಟ್ಟಿನ ಸತ್ಕರ್ಮದ ಹಾದಿಯನ್ನು ಅವರಿಗೆ ಇಂತಹ ಆರಾಧನಾ ಕೇಂದ್ರಗಳ ಮೂಲಕ ಕೈದಾಟಿಸಬೇಕೆಂದು ಅವರು ಕರೆ ನೀಡಿದರು.
ಶ್ರೀಕ್ಷೇತ್ರದ ಅಧ್ಯಕ್ಷ ಗಣೇಶ್ ಅಮೈ ಅಧ್ಯಕ್ಷತೆ ವಹಿಸಿದ್ದರು. ಉದುಮ ಶಾಸಕ ಸಿ.ಎಚ್. ಕುಂಞಬು ಮುಖ್ಯ ಅತಿಥಿಯÁಗಿ ಮಾತನಾಡಿದರು.
ಸಹಕಾರ ಭಾರತಿ ಕೇರಳ ರಾಜ್ಯಾಧ್ಯಕ್ಷ ವಕೀಲ ಕರುಣಾಕರ ನಂಬ್ಯಾರ್ ಧಾರ್ಮಿಕ ಉಪನ್ಯಾಸ ನೀಡಿದರು. ಜ್ಯೋತಿಷಿ ಶಶಿಧರನ್ ಮಾಂಙÁಡ್, ಬಾಲಕೃಷ್ಣ ಗುರುಸ್ವಾಮಿ, ಜಿ.ಎಸ್.ಟಿ.ಅಧಿಕಾರಿ ಜಯರಾಜ್ ಮಾತನಾಡಿದರು. ಡಾ| ಜಯದೇವ ಕಂಗಿಲ, ಡಾ| ನಾಗರಾಜ ಭಟ್, ಕೇರಳ ಕೃಷಿ ವಿವಿಯ ನಿವೃತ್ತ ಸಂಶೋಧನಾ ನಿರ್ದೇಶಕ ಡಾ. ಜಯಪ್ರಕಾಶ ನಾಯ್ಕ್ ಬಿ., ಬಾಲಕೃಷ್ಣ ನಾಯ್ಕ್ ಅಮೈ, ಎನ್. ದಿನೇಶನ್, ಗೋಪಾಲ ಗುರುಸ್ವಾಮಿ ಶುಭಾಶಂಸನೆಗೈದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಕೆ.ಎಂ. ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯ ದರ್ಶಿ ಗಣೇಶ್ ಕೆ.ಬಿ. ವಂದಿಸಿದರು. ಸಂಜಯ್ ಕುಮಾರ್ ನಿರೂಪಿಸಿದರು. ಬಳಿಕ ಓಂಕಾರ್ ಫ್ಯೂಶನ್ ಪೆರುಂಬಳ ತಂಡದವರಿAದ ಫ್ಯೂಶನ್ ಭಜನ್ ನಡೆಯಿತು.
ಕ್ಷೇತ್ರದಲ್ಲಿ ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ವಿವಿಧ ಕಾರ್ಯ ಕ್ರಮಗಳೊಂದಿಗೆ ಬೆಳಗ್ಗೆ ನಡೆಯಿತು. ಗಣಪತಿ ಹೋಮ, ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ದಿವ್ಯ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ, ಎಡನೀರು ಶ್ರೀಗಳಿಂದ ಆಶೀರ್ವಚನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 5ಕ್ಕೆ ಭರತನಾಟ್ಯ, ರಾತ್ರಿ 8 ಗಂಟೆಗೆ ಶ್ರೀ ರಾಮನಾಥ ಸಾಂಸ್ಕೃತಿಕ ಯಕ್ಷಗಾನ ತರಬೇತಿ ಕೇಂದ್ರ, ರಾಮನಗರ, ಕೋಟೆಕಣಿ ಇವರಿಂದ ಭಸ್ಮಾಸುರ ಮೋಹಿನಿ, ಶಬರಿಮಲೆ ಶ್ರೀ ಸ್ವಾಮಿ ಅಯ್ಯಪ್ಪ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ನಾಳೆ ಬೆಳಗ್ಗೆ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಸಂಜೆ 6ಕ್ಕೆ ದೀಪರಾಧನೆ, ತಾಯಂಬಕ, ರಾತ್ರಿ7ಕ್ಕೆ ಶ್ರೀ ದೇವರ ಉತ್ಸವ ನಡೆಯಲಿರುವುದು.

You cannot copy contents of this page