ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಹೆಸರಲ್ಲಿ ಮೋಟಾರು ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾಗದಂತೆ ಅಧಿಕಾರಿಗಳು ಜಾಗ್ರತೆ ವಹಿಸಬೇಕೆಂದು ಟ್ಯಾಕ್ಸಿ ಆಂಡ್ ಲೈಟ್ ಮೋಟಾರ್ ವೆಹಿಕಲ್ ಯೂನಿಯನ್ (ಬಿಎಂಎಸ್) ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ. ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷ ಸುನಿಲ್ ವಾಳಕ್ಕೋಡ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಅನಿಲ್ ಬಿ ನಾಯರ್, ಹರೀಶ್ ಕುದ್ರೆಪ್ಪಾಡಿ, ರಾಜೇಶ್ ಪೊಳ್ಳಕ್ಕಡ, ರಾಜೀವನ್ ಮಾವುಂಗಾಲ್, ಗೀತಾ ಬಾಲಕೃಷ್ಣನ್ ಮಾತನಾಡಿದರು. ನೂತನ ಪದಾಧಿ ಕಾರಿಗಳಾಗಿ ಸುನಿಲ್ ವಾಳಕ್ಕೋಡ್ (ಅಧ್ಯಕ್ಷ), ಚಂದ್ರನ್ ಕೋಟಪ್ಪಾರ, ಅಶೋಕನ್ ಕರುವಾಚ್ಚೇರಿ (ಉಪಾಧ್ಯಕ್ಷರು), ರಾಜೇಶ್ ಪೊಳ್ಳ ಕ್ಕಡ (ಪ್ರಧಾನ ಕಾರ್ಯದರ್ಶಿ), ವಿಜೇಶ್ ನೀಲೇಶ್ವರ, ಪ್ರಮೋದ್ ಕಾಸರಗೋಡು (ಜೊತೆ ಕಾರ್ಯ ದರ್ಶಿಗಳು), ರಾಜೀವನ್ ಮಾವುಂಗಾಲ್ (ಕೋಶಾ ಧಿಕಾರಿ) ಎಂಬಿವರನ್ನು ಆರಿಸಲಾ ಯಿತು. ದಿನೇಶ್ ಬಂಬ್ರಾಣ ಸಮಾ ರೋಪ ಭಾಷಣ ನಡೆಸಿದರು.ರಾಜೇಶ್ ಪೊಳ್ಳಕ್ಕಡ ಸ್ವಾಗತಿಸಿ, ರಾಜೀವನ್ ಮಾವುಂಗಾಲ್ ವಂದಿಸಿದರು.






