ರಜಾ ಕಾಲದಲ್ಲಿ ಉಲ್ಲಾಸ ಮೂಡಿಸಲು ಕೈಕಂಬದಲ್ಲಿ ಎಕ್ಸ್‌ಪೋ ಇಂದಿನಿಂದ

ಕುಂಬಳೆ: ರಜಾ ಕಾಲದಲ್ಲಿ ಉಲ್ಲಾಸದಿಂದಿರಲು ಉಪ್ಪಳ ಎಕ್ಸ್‌ಪೋ ಇಂದಿನಿಂದ ಆರಂಭಗೊಳ್ಳಲಿದೆ. ಏಷ್ಯನ್ ಟೂರ್ಸ್ ಆಂಡ್ ಟ್ರಾವಲ್ಸ್ ಇರಿಟ್ಟಿ ಕಾರ್ಯಕ್ರಮವನ್ನು ಪ್ರಾಯೋಜಿಸಿದೆ. ಸಂಜೆ 3 ಗಂಟೆಯಿಂದ ರಾತ್ರಿ ೧೦.೩೦ರ ವರೆಗೆ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 8ಗಂಟೆಯಿಂದ 10.30ರ ವರೆಗೆ ಪ್ರತೀ ದಿನ ಮಲಯಾಳದ ಖ್ಯಾತರಾದ ಕಲಾವಿದರು ಭಾಗವಹಿಸುವ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ. ಮಕ್ಕಳಿಗೆ, ಹಿರಿಯರಿಗೆ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮಗಳು, ಸ್ಥಳದಲ್ಲೇ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮದಂಗವಾಗಿ ಫ್ಲವರ್ ಶೋ, ಅಪೂರ್ವ ವಿಭಾಗದ ಹೂ ಕುಂಡಗಳು ಸಹಿತವಿರುವ ಸಾಮಗ್ರಿಗಳ ಮಾರಾಟವೂ ನಡೆಯಲಿದೆ. ಉಪ್ಪಳ ಕೈಕಂಬದಲ್ಲಿ ಎಕ್ಸ್‌ಪೋ ನಡೆಯಲಿದ್ದು, ಹಲವಾರು ಸ್ಟಾಲ್‌ಗಳು, ಫುಡ್‌ಕೋರ್ಟ್‌ಗಳು ಇರಲಿದೆ. ಮೇ ತಿಂಗಳ ೧೧ರ ವರೆಗೆ ಎಕ್ಸ್‌ಪೋ ಮುಂದುವರಿಯಲಿದೆಯೆಂದು ಸುದ್ದಿಗೋಷ್ಠಿಯಲ್ಲಿ ಎಂ.ಕೆ. ಮುಹಮ್ಮದ್, ನೌಶಾದ್ ಎಂಬಿವರು ತಿಳಿಸಿದ್ದಾರೆ.

RELATED NEWS

You cannot copy contents of this page