ಪೆರ್ಲ: ಹಿರಿಯ ಬಿಜೆಪಿ ಮುಖಂಡ ಶೇಣಿ ಬಾಲಕೃಷ್ಣ ನಾಯಕ್‌ರ ಪತ್ನಿ ಇಂದಿರಾ (52) (ಲತಾ ನಾಯಕ್) ನಿನ್ನೆ ನಿಧನ ಹೊಂದಿದರು. ಕಳೆದ ಕೆಲವು ಸಮಯಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. 2005ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಶೇಣಿ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೃತರು ಪತಿ, ಮಕ್ಕಳಾದ ರೂಪ, ದೀಪ, ಪ್ರದೀಪ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.






