ಕಳಾಯಿ ಹೊಳೆಯಿಂದ ಹೊಯ್ಗೆ ಸಾಗಾಟ: ಇಬ್ಬರ ಬಂಧನ; ಲಾರಿ ವಶಕ್ಕೆ

ಉಪ್ಪಳ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.  ಮೀಂಜ ಪಂಚಾಯತ್‌ನ ಅಮೆರಡ್ಕ ಕಳ್ಳಿಗೆ  ನಿವಾಸಿ ಸದಾನಂದ (5), ಲಾರಿ ಚಾಲಕ ಕನಿಲ ಬಡಾಜೆಯ ಜಾಕಿರ್ (31) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ವಿರುದ್ಧ ಸಾರ್ವಜನಿಕ ಸೊತ್ತು ಕಳವು ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ೧೨.೩೫ಕ್ಕೆ ಮೀಂಜ ಪಂಚಾಯತ್‌ನ ಕಳಾಯಿ ಹೊಳೆಯ ಅಮೆರಡ್ಕ ಕಳ್ಳಿಗೆ ಎಂಬಲ್ಲಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ  ಮಂಜೇಶ್ವರ ಸಿಐ ಜಿಜೀಶ್ ನೇತೃತ್ವದಲ್ಲಿ ಎಸ್‌ಐ ವೈಷ್ಣವ್ ರಾಮಚಂದ್ರನ್, ಪ್ರೊಬೆಶನರಿ ಎಸ್‌ಐ ಶಬರಿಕೃಷ್ಣನ್, ಪೊಲೀಸ್ ಸಂದೀಪ್ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ. ಹೊಯ್ಗೆ ಸಾಗಿಸಲು ಬಳಸುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು  ವಶಕ್ಕೆ ತೆಗೆದುಕೊಂಡಿ ದ್ದಾರೆ. ಹೊಯ್ಗೆ ಸಾಗಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಹೊಯ್ಗೆ ಸಾಗಾಟಗಾರರನ್ನು ಈ ಮೊದಲು ಠಾಣೆಗೆ ಕರೆಸಿ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೂ ಹೊಯ್ಗೆ ಸಾಗಾಟ ದಂಧೆ ಮುಂದುವರಿಯು ತ್ತಿದ್ದು, ಆದ್ದರಿಂದ ಅದರ ವಿರುದ್ದ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page