13 ವರ್ಷದ ಬಾಲಕಿ 23 ವರ್ಷದೊಳಗಿನ ಮಹಿಳಾ ತಂಡದ ನಾಯಕಿ

ಕಾಸರಗೋಡು: ವಿದ್ಯಾನಗರ ಪನ್ನಿಪ್ಪಾರೆ ಎಂ.ಜಿ ಕಾಲನಿ ಬಳಿಯ ಬಾಲಕಿ ಹರಿಪ್ರಿಯಾ ಔಕ್ 15,18,19 ಬಾಲಕಿಯರ ಕ್ರಿಕೆಟ್ ತಂಡ ದಲ್ಲಿ ಆಡಿ ಈಗ 23 ವರ್ಷದ ಕೆಳಗಿನ ಮಹಿಳೆಯರ ಜಿಲ್ಲಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆ ಯಾಗಿದ್ದಾಳೆ. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಿಕೆ ಲಕ್ಷ್ಮಿ-ಮಹೇಶ್‌ರಾಜು ದಂಪತಿ ಪುತ್ರಿಯಾದ ಹರಿಪ್ರಿಯಾ ಈಗ 13ನೇ ಹರೆಯದ ಲ್ಲಿದ್ದು ವಿದ್ಯಾನಗರ ಕೇಂದ್ರೀಯ ವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ೮ನೇ ತರಗತಿಗೆ ಪಾದಾರ್ಪಣೆಗೈದಿದ್ದಾಳೆ. ಫಾಸ್ಟ್ ಬೌಲರ್, ಬಲಗೈ ಬ್ಯಾಟ್ಸ್‌ಮ್ಯಾನ್ ಆದ ಈಕೆ ಆಲ್‌ರೌಂಡರ್ ಆಗಿದ್ದಾಳೆ.  2023ರಲ್ಲಿ 15ರೊಳಗಿನ ಬಾಲಕಿಯರ ಕ್ರಿಕೆಟ್ ತಂಡಕ್ಕೆ ಪ್ರಥಮವಾಗಿ ಆಯ್ಕೆಯಾದ ಬಳಿಕ ಈಕೆ ಮಹಿಳೆಯರ ಜಿಲ್ಲಾ ತಂಡವನ್ನು ನಿರಂತರವಾಗಿ ಪ್ರತಿನಿಧಿಸುತ್ತಿದ್ದಾಳೆ. ಕೊಡಿಯೇರಿ ಬಾಲಕೃಷ್ಣನ್ ಟೂರ್ನಮೆಂಟ್ ಸಹಿತ ಹಲವು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಆಡುತ್ತಿರುವ ಹರಿಪ್ರಿಯಾ ಔಕ್ ಕನ್ನಡತಿಯಾಗಿರುವುದು ನಾಡಿಗೆ ಹೆಮ್ಮೆ ತಂದಿದೆ.

You cannot copy contents of this page