ಆರ್‌ಎಂಪಿ ಕಾರ್ಯಕರ್ತನ ಮನೆಯ ಬಾವಿಯಲ್ಲಿ ಮಲ

ಕಲ್ಲಿಕೋಟೆ: ಆರ್‌ಎಂಪಿ ಕಾರ್ಯಕರ್ತನ ಮನೆಯ ಬಾವಿಗೆ ಮಲ ಎಸೆದಿರುವುದಾಗಿ ದೂರಲಾಗಿದೆ. ನಾದಾಪುರ ತುಣೇರಿ ಎಂಬಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಬೆಳಿಗ್ಗೆ ನೀರು ಮೇಲೆತ್ತಿದಾಗ  ಮಲ ಬೆರೆತಿರುವುದು ಗಮನಕ್ಕೆ ಬಂದಿದೆಯೆಂದು ಮನೆಯವರು ತಿಳಿಸಿದ್ದಾರೆ. ಆರ್‌ಎಂಪಿ ಕಾರ್ಯ ಕರ್ತ ತುಣೇರಿ ಚೆಕ್ಕಾಯಿಪೀಡಿಗ ಎಂಬಲ್ಲಿಗೆ ಸಮೀಪ  ತುಂಬೋಲಿಪೊ ಯಿಲ್ ಮನೋಜನ್ ಎಂಬವರ ಮನೆಯ ಬಾವಿಗೆ ಮಲ ಎಸೆಯಲಾ ಗಿದೆ. ಮನೋಜನ್ ಹಾಗೂ ಸಹೋದರ ಈ ಬಾವಿಯಿಂದ ನೀರು ಉಪಯೋಗಿಸುತ್ತಿದ್ದಾರೆ. ಆರ್‌ಎಂಪಿ ರೂಪೀಕರಣಗೊಂಡ ಬಳಿಕ ಮನೋಜನ್ ಈ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದರು. ಆದರೆ ತನಗೆ ವೈಯಕ್ತಿಕವಾಗಿ ಯಾರೊಂ ದಿಗೂ  ಸಿಟ್ಟು ಇಲ್ಲವೆಂದು ಮನೋ ಜನ್ ತಿಳಿಸಿದ್ದಾರೆ. ಇದೇ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಪರವಾಗಿ ಕಾರ್ಯಾಚರಿಸಿದ ದ್ವೇಷದಿಂದ  ಮನೋಜನ್‌ರ ಬಾವಿಗೆ ಮಲ ಎಸೆದಿರುವುದಾಗಿ ಯುಡಿಎಫ್ ನೇತಾರರು ಆರೋಪಿಸಿದ್ದಾರೆ. ವಿಷಯ ತಿಳಿದು ಪೊಲೀಸರು ಹಾಗೂ ಪಕ್ಷದ ನೇತಾರರು ಸ್ಥಳಕ್ಕೆ ತಲುಪಿದ್ದಾರೆ.

You cannot copy contents of this page