ಕುಂಬಳೆ: ಪ್ರಾಯಪೂರ್ತಿಯಾ ಗದ ಮಕ್ಕಳು ವಾಹನ ಚಲಾಯಿ ಸುವುದರ ವಿರುದ್ಧ ಕುಂಬಳೆಯಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳ ತೊಡಗಿದ್ದಾರೆ. ಇದರಂತೆ ಠಾಣಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್ ನಡೆಸಿದ ಕಾರ್ಯಾ ಚರಣೆ ವೇಳೆ ಸ್ಕೂಟರ್ ಚಲಾ ಯಿಸುತ್ತಿದ್ದ ಮೂವರು ಮಕ್ಕಳನ್ನು ಪತ್ತೆಹಚ್ಚಿದ್ದಾರೆ. ಅವರ ವಾಹನ ಗಳನ್ನು ಕಸ್ಟಡಿಗೆ ತೆಗೆದು ಆರ್‌ಸಿ ಮಾಲಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೊನ್ನೆ ಮಧ್ಯಾಹ್ನ ಪೆರ್ವಾಡು ಜಂಕ್ಷನ್‌ನಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಅಪರಿಮಿತ ವೇಗದಲ್ಲಿ ಸ್ಕೂಟರ್ ಚಲಾಯಿಸುತ್ತಾ ಬಂದ 15ರ ಹರೆಯದ ಬಾಲಕನನ್ನು ಪೊಲೀಸರು ತಡೆದು ನಿಲ್ಲಿಸಿ ಠಾಣೆಗೆ ತಲುಪಿಸಿದ್ದಾರೆ. ಬಳಿಕ ವಿಚಾರಿಸಿ ದಾಗ ತಾಯಿ ಸ್ಕೂಟರ್ ಓಡಿಸಲು ನೀಡಿರುವು ದಾಗಿ ಬಾಲಕ ತಿಳಿಸಿ ದ್ದಾನೆ. ಇದರಂತೆ ಕುಂಟಂಗೇ ರಡ್ಕದ ಶಶಿಕುಮಾರ್‌ರ ಪತ್ನಿ ಪಾರ್ವತಿ ವಿರುದ್ಧ ಕೇಸು ದಾಖಲಿ ಸಲಾಗಿದೆ. ಬಳಿಕ ಬಾಲಕನನ್ನು ಮನೆಗೆ ಕಳುಹಿಸಲಾಯಿತು. ಇದೇ ರೀತಿ ಆರಿಕ್ಕಾಡಿ ಅಂಡರ್ ಪಾಸ್ ಬಳಿ ವಾಹನ ತಪಾಸಣೆ ವೇಳೆ ಅಪರಿಮಿತ ವೇಗದಲ್ಲಿ ಸ್ಕೂಟರ್ ಚಲಾಯಿಸಿ ಬರುತ್ತಿದ್ದ 17ರ ಹರೆಯದ ಬಾಲಕನನ್ನು ಪೊಲೀಸರು ತಡೆದು ನಿಲ್ಲಿಸಿ ವಿಚಾರಿಸಿದಾಗ ತನಗೆ ತಾಯಿ ಸ್ಕೂಟರ್ ನೀಡಿರುವುದಾಗಿ ತಿಳಿಸಿದ್ದಾನೆ. ಇದರಿಂದ ಬಂಬ್ರಾಣ ಕಾಮಿಲ್ ಮಂಜಿಲ್‌ನ ಖಾಲಿದ್‌ರ ಪತ್ನಿ ಬಲ್ಕೀಸ್ ವಿರುದ್ಧ ಕೇಸು ದಾಖಲಿಸಿ ಬಾಲಕನನ್ನು ಮನೆಗೆ ಕಳುಹಿಸಲಾಯಿತು. ಪೆರ್ವಾಡು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರೋಡ್‌ನ ಬಸ್ ವೈಟಿಂಗ್ ಶೆಡ್ ಸಮೀಪ ಸ್ಕೂಟರ್ ಚಲಾಯಿಸುತ್ತಾ ಬಂದ 15ರ ಹರೆಯದ ಬಾಲಕನನ್ನು ಪೊಲೀಸರು ತಡೆದು ನಿಲ್ಲಿಸಿ ವಿಚಾರಿಸಿ ದಾಗ ಸ್ಕೂಟರ್ ನೀಡಿರುವುದು ಚಿಕ್ಕಪ್ಪನೆಂದು ತಿಳಿಸಿದ್ದಾನೆ. ಇದರಂತೆ ಉಪ್ಪಳ ಕೋರಿಕ್ಕಾರ್ ಅರಾಫತ್ ಮಂಜಿಲ್‌ನ ಅನ್ವರ್ ವಿರುದ್ಧ ಕೇಸು ದಾಖಲಿಸಿ ಬಾಲಕ ನನ್ನು ಬಿಡುಗಡೆಗೊಳಿಸಲಾಯಿತು.
ಪ್ರಾಯಪೂರ್ತಿಯಾಗದ ಮಕ್ಕಳು ಸಮಾನ ವಯಸ್ಕರಾದ ಮೂರ್ನಾಲ್ಕು ಮಂದಿಯನ್ನು ದ್ವಿಚಕ್ರ ವಾಹನಗಳಲ್ಲಿ ಕುಳ್ಳಿರಿಸಿ ಅಪರಿಮಿತ ವೇಗದಲ್ಲಿ ಸಂಚರಿಸುತ್ತಿರುವುದಾಗಿ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್ ತಿಳಿಸಿದ್ದಾರೆ.
ಈ ಬಗ್ಗೆ ರಕ್ಷಕರೊಂದಿಗೆ ತಿಳಿಸಿದಾಗ ತಮ್ಮ ಮಕ್ಕಳಿಗೆ ಸ್ಕೂಟರ್ ಚಲಾಯಿಸಲು ತಿಳಿದಿಲ್ಲವೆಂದು ತಿಳಿಸಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಮಕ್ಕಳು ಸ್ಕೂಟರ್ ಚಲಾಯಿಸುವುದರ ವಿರುದ್ಧ ಕಠಿಣ ಕ್ರಮ ಮುಂದುವರಿಸುವುದಾಗಿ ಎಸ್‌ಐ ತಿಳಿಸಿದ್ದಾರೆ.






