ಬೀದಿನಾಯಿಗಳ ಕಾಟ: ಉಪ್ಪಳ, ಹೊಸಂಗಡಿ ಪ್ರದೇಶದಲ್ಲಿ ಸಂಚಾರಕ್ಕೆ ಆತಂಕ

ಉಪ್ಪಳ: ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ವ್ಯಾಪಕ ಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನುoಟುಮಾಡಿದೆ. ಮಂಗಲ್ಪಾಡಿ, ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸವಾರಿ ನಡೆಸುತ್ತಿರುವ ಬೀದಿ ನಾಯಿಗಳ ಹಿಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹೊಸಂಗಡಿ, ಉಪ್ಪಳ ಪೇಟೆ ಸಹಿತ ಒಳ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ವ್ಯಾಪಕ ಗೊಂಡಿರುವುದಾಗಿ ದೂರಲಾಗಿದೆ.
ಪ್ರತಾಪನಗರದ ಶಿವಶಕ್ತಿ ಮೈದಾನ ಹಾಗೂ ಪರಿಸರ ಪ್ರದೇಶದಲ್ಲಿ ರಾತ್ರಿ ಹಗಲೆನ್ನದೆ 10ರಷ್ಟು ನಾಯಿಗಳು ನಿರಂತರವಾಗಿ ಈ ಪರಿಸರದ ಗಣೇಶ ಮಂದಿರ, ಗಾಯತ್ರಿ ಮಂದಿರ, ಗುಳಿಗ ಬನ ಪರಿಸರದಲ್ಲಿ ಅಲೆದಾಡುತ್ತಿರುವುದು ಸ್ಥಳೀಯರನ್ನು ಭೀತಿಗೊಳಗಾಗುವಂತೆ ಮಾಡಿದೆ. ದ್ವಿಚಕ್ರ ವಾಹನ ಸವಾರರನ್ನು, ನಡೆದು ಹೋ ಗುವವರನ್ನು ಬೆನ್ನಟ್ಟುತ್ತಿರುವುದಾಗಿ ದೂರಲಾಗಿದೆ.
ಇದರಿಂದ ಈ ಪರಿಸರದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರ ಸಹಿತ ಊರವರು ಆತಂಕಗೊoಡಿದ್ದಾರೆ. ಮೈದಾನದಲ್ಲಿ ದಾರಿ ದೀಪ ಉರಿಯದೆ ಇರುವುದರಿಂದ ರಾತ್ರಿ ಹೊತ್ತಲ್ಲಿ ಸಂಚರಿಸುವರಿಗೆ ಆತಂಕ ಉಂಟಾಗಿದೆ.

You cannot copy contents of this page