ಸಾಕುನಾಯಿ ದಾಳಿ: ಪಾದಚಾರಿಗೆ ಗಂಭೀರ ಗಾಯ

ಕುಂಬಳೆ: ಸಾಕು ನಾಯಿಯ ದಾಳಿಯಿಂದ ಗಂಭೀರ ಗಾಯ ಗೊಂಡು ಪಾದಚಾರಿಯೋರ್ವ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕುಂಬಳೆ ಬದ್ರಿಯಾನಗರದ ಮುಜೀಬ್ ರಹ್ಮಾನ್ (52) ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ಮಾಳಿಯಂಗರ ಪೆರ್ವಾಡು ರಸ್ತೆಯಲ್ಲಿ  ಬುಧವಾರ ಬೆಳಿಗ್ಗೆ ೭ ಗಂಟೆ ವೇಳೆ  ಮುಜೀಬ್ ರಹ್ಮಾನ್ ನಡೆದು ಹೋಗುತ್ತಿದ್ದಾಗ ಸಮೀಪದ ಮನೆಯೊಂದರ ಗೇಟ್ ಮೂಲಕ ಹೊರಗೆ ಓಡಿ ಬಂದ ನಾಯಿ ಕಚ್ಚಿ ಗಾಯಗೊಳಿ ಸಿದೆ ಎಂದು ದೂರಲಾಗಿದೆ. ನಾಯಿಯ ದಾಳಿ ವೇಳೆ ಮುಜೀಬ್ ರಹ್ಮಾನ್ ಆಯತಪ್ಪಿ ಬಿದ್ದಿದ್ದು ಅವರ ಬೊಬ್ಬೆ ಕೇಳಿ ಸ್ಥಳೀಯರು ಕೂಡಲೇ ತಲುಪಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಬಿದ್ದುದರಿಂದ  ಇವರ ಎಡಗೈಯ ಎಲುಬು ಮುರಿದಿದೆ. ಶಸ್ತ್ರಚಿಕಿತ್ಸೆ ನಡೆಸಿ ಸ್ಟೀಲ್ ರಾಡ್ ಅಳವಡಿಸಲಾಗಿದೆಯೆಂದು ಮುಜೀಬ್ ರಹ್ಮಾನ್ ತಿಳಿಸಿದ್ದಾರೆ.

You cannot copy contents of this page